Saturday, 14 December 2019

ವೆಂಕಟೇಶ ಕಾಯೋ ಕಿಂಕರ ankita jagannatha vittala

ಜಗನ್ನಾಥದಾಸರು

ವೆಂಕಟೇಶ ಕಾಯೋ ಕಿಂಕರರವನೆಂದು

ಪಂಕಜಾಸನ ಶಂಕರಾರ್ಚಿತ

ಸುದರುಶನಾಂಕಿತ ll ಪ ll


ವಾಸುದೇವ ನೀನೆ ಶ್ರೀ ಸರಸಿಜ l

ವೀಶ ಫಣಿಪ ಮ l

ಹೇಶ ವಾಸವರಾಶೆ ಪೂರೈಸಿ l

ಪೋಷಿಸುವ ಜಗದೀಶ ಜೀವನದಾವಾ l

ರಾಶಿ ರಾಜಾಧಿಪ ಭೇಶ ರವಿ ಸಂ

ಕಾಶ ಕರಿವರದ ಕ್ಲೇಶಹಾ ll 1 ll


ಸ್ವಾಮಿತೀರ್ಥವಾಸಾ ಸ್ವರಮಣ ಭಕುತರ l

ಕಾಮಿತಪ್ರದ ಕೈರವದಳ l

ಶ್ಯಾಮ ಸುಂದರನೇ ಹೇಮ ಶೃಂಗೀವರ l

ಧಾಮ ದೀನಬಂಧೊ l

ಸಾಮಸನ್ನುತ ಸೋಮಧರ ಸು l

ತ್ರಾಮಮುಖ ಸುರಸ್ತೋಮಗಾ ll 2 ll 


ತ್ರಿಗುಣಾತೀತ ನರಮೃಗರೂಪಾ ನಿನ್ನ l

ಪೊಗಳಬಲ್ಲೆನೆ ನಿಗಮವೇದ್ಯನೆ l ಜಗನ್ನಾಥವಿಟ್ಠಲಾ  ಸ್ವಗತಭೇದ ಶೂನ್ಯ l 

ಮುಗಿವೆ ಕರಗಳ ಪ l

ನ್ನಗನಗಾಧಿಪ ಪೊಗರೊಗುವ ನಗೆಮೊಗದ ಸೊಬಗಿನ ಸುಗುಣನೆ ll 3 ll

***


ವೆಂಕಟೇಶ ಕಾಯೋ ಕಿಂಕರರವನೆಂದು ಪ

ಪಂಕಜಾಸನ ಶಂಕರರಾರ್ಚಿತ
ಶಂಬಸುದರ್ಶನಾಂಕಿತ ಅ.ಪ.

ವಾಸುದೇವ ನೀನೆ ಶ್ರೀ ಸರಸಿಜಭವ
ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ
ಪೋಷಿಸುವ ಜಗದೀಶ ಜೀವನದ ವಾ
ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ 1

ಸ್ವರಮಣ ಭಕುತರ
ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ
ಹೇಮ ಶೃಂಗೀವರಧಾಮ ದೀನಬಂಧು
ಸನ್ನುತ ಸೋಮಧರ
ಸುತ್ರಾಮ ಮುಖ ಸುರಸ್ತೋಮನಾ 2

ತ್ರಿಗುಣಾತೀತ ನರಮೃಗರೂಪ ನಾನಿನ್ನ
ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ
ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ
ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ 3
*********

No comments:

Post a Comment