ರಾಗ ಕಾಂಭೋಜ ಝಂಪೆತಾಳ
ಕೃಷ್ಣನಾಮವ ನೆನೆದು ಧನ್ಯನಾಗೋ || ಪ||
ನೆಲೆಯಿಲ್ಲ ಸಂಸಾರವಿಳಿದಂತೆ ಈ ಬಾವಿಯೊಳು
ಸಿಲುಕಿ ಸಿಲುಕಿ ಭ್ರಮಿತನಾದೆ
ಪಣೆಯಲಿ ಬರೆದ ಕಲ್ಪಣವದು
ನರಹರಿಯ ಸ್ಮರಣೆಯೊಳಗಿರು ಕಂಡ್ಯ ಮನವೆ ||
ದಾರ ಪುತ್ರರಿಗೆ ನೀ ಹಂಬಲಿಸಿ ಚಿಂತಿಸಿ
ಮಾಯ ಪ್ರಪಂಚದೊಳು ಸಿಲುಕಿ ಸಿಲುಕಿ
ಏನು ಎಂತೆಂಬುವ ಜ್ಞಾನವನು ತಿಳಿಯದೆ
ಶ್ರೀರಾಮರ ಸ್ಮರಣೆಯೊಳಗಿರು ಕಂಡ್ಯ ಮನವೆ ||
ಪುತ್ರ ಪೌತ್ರರ ನೆಚ್ಚಿ ಕೆಡಲುಬೇಡ
ಮಿತ್ರಬಂಧುಗಳೆಂಬ ಹಂಬಲವು ಬೇಡ
ದತ್ತದಲಿ ಬರೆದ ಕಲ್ಪಣವದು ತಪ್ಪದು
ಅಚ್ಯುತನ ಸ್ಮರಣೆಯೊಳಗಿರು ಕಂಡ್ಯ ಮನವೆ ||
ಒಂದೊಂದು ಎಡೆಗಳಿಗೆ ಚಂದವಾಗಿ ತೋರುತಲಿದೆ
ಮುಂದೆ ಬಡಿಸಿದ ಎಡೆ ತೀರಿಸುತ್ತ
ಪುಂಡರೀಕಾಕ್ಷ ಸಿರಿಪುರಂದರವಿಠಲನ್ನ
ತಂಡತಂಡದಿ ನೆನೆದು ಸುಖಿಯಾಗು ಮನವೆ ||
***
ಕೃಷ್ಣನಾಮವ ನೆನೆದು ಧನ್ಯನಾಗೋ || ಪ||
ನೆಲೆಯಿಲ್ಲ ಸಂಸಾರವಿಳಿದಂತೆ ಈ ಬಾವಿಯೊಳು
ಸಿಲುಕಿ ಸಿಲುಕಿ ಭ್ರಮಿತನಾದೆ
ಪಣೆಯಲಿ ಬರೆದ ಕಲ್ಪಣವದು
ನರಹರಿಯ ಸ್ಮರಣೆಯೊಳಗಿರು ಕಂಡ್ಯ ಮನವೆ ||
ದಾರ ಪುತ್ರರಿಗೆ ನೀ ಹಂಬಲಿಸಿ ಚಿಂತಿಸಿ
ಮಾಯ ಪ್ರಪಂಚದೊಳು ಸಿಲುಕಿ ಸಿಲುಕಿ
ಏನು ಎಂತೆಂಬುವ ಜ್ಞಾನವನು ತಿಳಿಯದೆ
ಶ್ರೀರಾಮರ ಸ್ಮರಣೆಯೊಳಗಿರು ಕಂಡ್ಯ ಮನವೆ ||
ಪುತ್ರ ಪೌತ್ರರ ನೆಚ್ಚಿ ಕೆಡಲುಬೇಡ
ಮಿತ್ರಬಂಧುಗಳೆಂಬ ಹಂಬಲವು ಬೇಡ
ದತ್ತದಲಿ ಬರೆದ ಕಲ್ಪಣವದು ತಪ್ಪದು
ಅಚ್ಯುತನ ಸ್ಮರಣೆಯೊಳಗಿರು ಕಂಡ್ಯ ಮನವೆ ||
ಒಂದೊಂದು ಎಡೆಗಳಿಗೆ ಚಂದವಾಗಿ ತೋರುತಲಿದೆ
ಮುಂದೆ ಬಡಿಸಿದ ಎಡೆ ತೀರಿಸುತ್ತ
ಪುಂಡರೀಕಾಕ್ಷ ಸಿರಿಪುರಂದರವಿಠಲನ್ನ
ತಂಡತಂಡದಿ ನೆನೆದು ಸುಖಿಯಾಗು ಮನವೆ ||
***
pallavi
krSNa nAmava nenedu dhanyanAgO
caraNam 1
nereyilla samsAraviLidante bAviyoLu siluki bhramitanAde phaNeyalli
bareda kalpaNavadu tappadu narahariya smaraNeyoLagiralu kaNDya manave
caraNam 2
dAra putrige nI hambalisi cintisi mAya prapancadoLu siluki siluki
Enu entembuva jnAnavanu tiLiyade shrI rAmara smaraNeyoLagiru kaNDya manave
caraNam 3
putra pautrara necci keDalu bEDa mitra bandhugaLemba hambalavu bEDa
dattadalli bareda kalpaNavadu tappadu acyutana smaraNeyoLagiru kaNDya manave
caraNam 4
ondondu eDegaLige candavAgi tOrutide munde baDisida eDe tOrisutta
puNDarIkAkSa siri purandara viTTalanna daNDa daNDadi nenedu sukhiyAgu manave
***