Showing posts with label ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ಸನ್ನುತ ಚರಣ narasimha vittala brahmanya teertha stutih. Show all posts
Showing posts with label ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ಸನ್ನುತ ಚರಣ narasimha vittala brahmanya teertha stutih. Show all posts

Saturday, 1 May 2021

ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ಸನ್ನುತ ಚರಣ ankita narasimha vittala brahmanya teertha stutih

ಶ್ರೀ ನರಸಿಂಹದಾಸರು ( ಶ್ರೀ ಜಗನ್ನಾಥದಾಸರ ತಂದೆ )... 


ರಾಗ : ಅಹರಿ ರಾಗ : ಏಕ 


ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ।

ಸನ್ನುತ ಚರಣ ಪಾವನ ಸುಚರ್ಯಾ ।। ಪಲ್ಲವಿ ।। 

ಘನ್ನ ಭವದ ಭಯವನ್ನು ಕಳೆದು । ಯತಿ ।

ರನ್ನ ಯೆನ್ನನು ಧನ್ಯನ ಮಾಡೋ ।। ಅ. ಪ ।। 

ಪುರುಷೋತ್ತಮ । ಸುತೀ ।

ರ್ಥರ ಪ್ರಿಯ ಸುಕುಮಾರ ।

ದುರಿತೌಘ ಜೀಮೂತ ಚಂಡ ಸಮೀರ ।

ಸುರರುಚಿ ತುಳಸೀ ಪಂಕಜಮಣಿ ಹಾರ ।।

ಧರಿಸಿ ಮೆರೆವೋ ದಿನಕರನವತಾರ ।

ಕರುಣದಿ ತವ ಶ್ರೀಕರ ಚರಣಾಂಬುಜ ।

ದರುಶನವ ಕೊಡು ಗುಣಗಣ ನಿಧಿಯೇ ।। ಚರಣ ।। 

ಸೇವಿಪ ಜನರಿಗೆ ದೇವತರುವೆನಿಪ ।

ಶ್ರೀವಿಠ್ಠಲ ತಾವರೆ ಮಧುಪಾ ।

ಕೋವಿದ ಜನರು ಸಂಭಾವಿಸಿ ಸ್ತುತಿಪ ।।

ಪಾವನ್ನ ಪಾದಾರ್ಚಿತ ಭಾವಜ ಮುನಿಪಾ ।

ಪಾವನ ಸುಮತನ ಜೀವರ ಚಂದ್ರನೆ ।

ಪಾವನ ಮತಿ ಕೊಡು ನೀ ಒಲಿದೆನಗೆ ।। ಚರಣ ।। 

ಹರಿಭಕ್ತಿ ವೈರಾಗ್ಯ ಪರತತ್ತ್ವಜ್ಞಾನ ।

ವರದ ಪಾಲಿಸು ಸರ್ವವಿದ್ಯಾ ಪ್ರವೀಣ । ನ ।

ರಸಿಂಹವಿಠ್ಠಲ ಶ್ರೀ ಹರಿ ಸನ್ನಿಧಾನ ।।

ಕರುಣಾಪಾತ್ರನೇ ದಿವ್ಯವರ ಪೂರ್ಣ ಜ್ಞಾನ ।

ಹರಿಗುರು ಭಜನ ತ್ವತ್ಪದ ವ್ಯಾಸಾರ್ಯರ ।

ಗುರುವೆಂದೆನಿಸಿದೆ ಧರೆಯೊಳು ಮೆರೆದೆ ।। ಚರಣ ।। 

****