Showing posts with label ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ prasannavenkata ARCHANE MAADIRAYYA SRI BHAGAVADARCHANE. Show all posts
Showing posts with label ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ prasannavenkata ARCHANE MAADIRAYYA SRI BHAGAVADARCHANE. Show all posts

Monday, 8 November 2021

ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ankita prasannavenkata ARCHANE MAADIRAYYA SRI BHAGAVADARCHANE



ಅರ್ಚನೆ ಮಾಡಿರಯ್ಯ 
ಶ್ರೀ ಭಗವದರ್ಚನೆ ಮಾಡಿರಯ್ಯ
ಅರ್ಚನೆ ಮಾಡುವ ಅರ್ಚಕ ಬುಧರಿಗೆ
ಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.

ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ 
ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ 
ಶ್ರೀ ಹರಿವೇದತಂತ್ರೋಕ್ತ ಪಥದಿ 
ನಿರಂತರ ಮರೆಯದೆ 1

ಪೃಥುಧ್ರುವ ಅಂಬರೀಶ ಸುಧರ್ಮಜ 
ದಿತಿಜೋದ್ಭವ ಅಕ್ರೂರಕೃತವರ್ಮ 
ಸಾತ್ಯಕಿ ಯದುಕುಲ ಸುರಖಷಿಯತಿತತಿ 
ಅರ್ಚಿಸಿ ಅತಿಧನ್ಯರಾದರೆಂದು 2

ಅನಂತಮೂರ್ತಿಯೊಳು ತನಗೊಂದು 
ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ 
ಸಂತತಿಗಳಿಂದತಾನು ಇಷ್ಟನಾಗಿ 
ನಾರಾಯಣನಾತ್ಮನೆಂದು 3

ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ 
ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ 
ಸ್ನಾನರಮ್ಯಾಯುಧ ಕೌಸ್ತುಭಮಣಿ 
ಮಾಲೆಯಿಂದ 4

ಧ್ಯಾನಾವಾಹನ ಸ್ನಾನ 
ಸುಪಾದ್ಯಾಚಮನಾಘ್ರ್ಯ ಧೂಪದೀಪ 
ಪ್ರಸೂನ ತುಳಸಿ ಗಂಧಮೋಘ 
ನೈವೇದ್ಯದಿಂಮಾನಸಾರ್ಚನೆ 
ಪ್ರತ್ಯಕ್ಷಾಗಲಿ ಎಂತೆಂದು 5

ವೀರಾವರ್ಣದ ಮಧ್ಯದಿ ಶ್ರೀ 
ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ 
ರತ್ನಾಭರಣವೈಜಯಂತಿಕಿರೀಟ
ಕುಂಡಲದಾಮಹಾರ ನೂಪುರಗಳಿಂದ6

ದಿವ್ಯಾಂಬರ ಭೂಷಣ ನವರತುನ 
ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ 
ಶ್ರೀಭೂಮುಕ್ತಾಮುಕ್ತಸೇವ್ಯ
ಮಾನನಾಪಾದ ಮೌಳ್ಯಾಂತ ವೀಕ್ಷಿಸಿ7

ಬಹು ನೀರಾಂಜನಗಳಿಂದ ಸದ್ವೇದೋಕ್ತ 
ಗಹಗಹನ ಸೂತ್ರಂಗಳಿಂದಅಹಿವರಶಯನಜ 
ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು 
ಪರವಶದಿಂದ 8

ತಾಳದಂಡಿಗೆ ಜಾಗಟೆ ಶಂಖ ಮದ್ದಳೆ 
ಕಂಸಾಳೆಭೇರಿಆಲಾಬುತಂಬೂರಿ
ಭಾಗವತಗಾನಮೇಳೈಸಿ ತುತೂರಿ 
ವಾಜಂತ್ರಿ ಘೋಷದಿಂದ 9

ಅಲವಬೋಧರು ಪೇಳಿದ 
ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ 
ಗೀತ ನೃತ್ಯ ಬಲು ಪ್ರೇಮದಲಿ 
ಮಾಡಿಹೊಳೆವ ಬಿಂಬಾತ್ಮನ 
ಕಾಂಬ ಲವಲವಿಕೆಯಿಂದ 10

ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ 
ಪರಮಾತ್ಮನೆಂದುಆತ್ಮ ಮತ್ತೆ 
ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ 
ನಿವೇದನ ಭಕ್ತಿ ನವಕಗಳಿಂದ 11

ಸರ್ವೇಂದ್ರಿಯ ಮನಸ್ಥ 
ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ 
ಪ್ರೇರಕನೆಂಬೊ ವಿಜ್ಞಾನಮಾರ್ಗದಿ
ಸರ್ವಕಾಲದಲಿ ಸರ್ವಸಮರ್ಪಣೆಯೆಂದು 12

ಮಂದಜನರು ಭಕ್ತಿಲಿ ದೂರ್ವನೀರಿಂದೆ 
ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
****