ankita ವಾಸುದೇವಕೃಷ್ಣವಿಠಲ
ರಾಗ: ಮೋಹನ ತಾಳ: ಆದಿ
ಕಂಡೆ ಕಂಡೆ ಬೃಂದಾವನವನು ಕಂಡೆ ಪ
ಕಂಡೆ ಕಂಡೆ ಶ್ರೀರಾಘವೇಂದ್ರಯತಿಗಳ ಪ್ರ-
ಚಂಡ ಮಾರುತನ ಎದುರಿಗೆ ನಿಂತವರ ಅ. ಪ
ಕರದೊಳು ಜಪಮಣಿ ಧ್ಯಾನದೊಳಿರುವ
ಕೊರಳಲಿ ತುಳಸಿಯಮಾಲೆಯನು
ಕೋರಿದವರಿಗೆ ಕರೆದು ಅಭಯನೀವ
ಕರುಣಾಸಾಗರ ನಮ್ಮ ಗುರುರಾಜರ ನಾ 1
ಚಂದದಿ ಕಾವಿಯ ಧರಿಸಿ
ಚಂದ್ರಿಕೆ ಬರೆದ ಕುಂದಣಕಾಯದ ಮುನಿಯನು ಕಂಡೆ
ಕುಂದದೆ ರಾಜನ ಕುಹಯೋಗವ ಹರಿಸಿದ
ಚಂದ್ರವದನ ನಮ್ಮ ವ್ಯಾಸರಾಜರ ನಾ 2
ಹುಸಿಯಮಾತಲ್ಲ ಈ ಕೂಸಿನ ಮಹಿಮೆಯು
ವಿಷವನು ಕುಡಿಸಿದ ಪಿತನ ಮಾತಿಗೆ
ವಾಸುದೇವಕೃಷ್ಣವಿಠಲನ ತೋರಿದ
ಲೇಸಾಗಿ ಪ್ರತಿದಿನ ಉತ್ಸವದಲಿ ಮೆರೆಯುವ ಪ್ರಹ್ಲಾದರಾಜರ ನಾ 3
***