..
ವಿಷಯಾಸೆ ಬಿಡಲೊಲ್ಲದೋ ದೇವ ಪ.
ವಸುದೇವಸುತ ನಿನ್ನ ವಶವಾಗೋತನಕ ಅ.ಪ.
ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1
ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2
ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3
ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4
ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
***