..
ಶ್ರೀನಿವಾಸದೇವರು
ಬಾರಯ್ಯ ವೇಂಕಟ ಮನ್ಮನಕೆ
ತ್ವರಿತದಿ ನಿಜನಾರೀಸಹಿತದಿ ಈ ಸಮಯಕೆ
ಶರಣೆಂಬೆನು ಪದಯುಗಕೆ ಪ
ಸಾರಿದ ನಿಜಶÀರಣನ ಈ ಭವಭÀವ
ಘೋರಭಯವ ಪರಿಹÀರಿಸುವುದಕ್ಕೆಅ.ಪ
ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ
ದೋಷ ನಿರ್ಲಿಪ್ತಾ
ಮುಕ್ತಾ ಮುಕ್ತ ಜೀವರ ಗಣದಾಪ್ತಾ
ನೀ ಸರ್ವತ್ರದಿ ವ್ಯಾಪ್ತ
ಭಕ್ತನ ಹೃದಯದಿ ವ್ಯಕ್ತನಾಗಿ ನಿಜ
ಮುಕ್ತಿಪಥವ ತೋರೊ ಭಕ್ತಿಯನಿತ್ತು 1
ಆನಂದನಿಲಯಾ ನಿರ್ಮಲಕಾಯಾ
ಕವಿಜನಗೇಯಾ
ಆನಂದದಾಯಕ ನಿರ್ಜಿತಮಾಯಾ
ಕಾಯಯ್ಯಾ ಜೀಯಾ
ಆನತಜನಸನ್ಮಾನದ ಮನ್ಮನ
ವನಜದಿ ನೀ ಸನ್ನಿಹಿತಾಗುವುದಕೆ 2
ಸೋಮಾಸುರನಾಮಕ ದೈತ್ಯನ ಕೊಂದೂ
ವೇದವ ತಂದೂ
ಕೂರ್ಮ ಕಿಟ ನರಹರಿ ರೂಪದಿ ನಿಂದೂ
ವಾಮನನೆಂದೂ
ರಾಮ ಭಾರ್ಗವ ಯದುಕುಲಸಾಗರ -
ಸೋಮ ಬೌದ್ಧ ಕಲ್ಕಿ ಪ್ರೇಮದಿ ಮನಕೆ 3
ನಿಗಮಗೋಚರ ನಿತ್ಯಾನಂದಾ
ಸುಗಮ ನಿನ್ನಿಂದಾ
ಬಗೆಬಗೆ ಜನ್ಮವನೈದಿದೆ ಮುಕುಂದಾ
ಮುಗಿವೆನೊ ಕರದಿಂದಾ
ಅಗಣಿತ ಗುಣನಿಧಿ ಸುಗಮದಿ ಭವದ
ಬಗೆಯನು ತಿಳಿಸೊ ನಗೆ ಮೊಗದಿ ಬಾ 4
ವಿಧಿಶಂಭುವಂದಿತ ಪದಯುಗಕಮಲಾ
ನಿತ್ಯ ನಿರ್ಮಲಾ
ಆಧಿಭೂತಾಧ್ಯಾತ್ಮಿಕತಾಪದ ಶಮಲಾ
ನೀ ಮಾಡೆನ್ನನು ವಿಮಲಾ
ಸದಯ ಸುಧಾಕರ ಹೃದಯದಿ ತವಪದ
ಪದುಮ ಭಜಿಪೆ ನೀ ಮುದದಲಿ ಮನಕೆ5
ಸಾಸಿರನಾಮ ನತಜನಪ್ರೇಮಾ
ಪೊರೆಯೋ ಶ್ರೀ ರಾಮಾ
ಆಶೀ ಪೂರ್ತಿಸಿ ಮಾಡೆನ್ನಲಿ ಪ್ರೇಮಾ
ಸುರಸಾರ್ವಭೌಮಾ
ವಾಸಮಾಡಿ ಅಭಿಲಾಷೆಯ ಪೂರ್ತಿಸೊ
ವಾಸುದೇವ ವಾರಾಸಿಜರಮಣಾ 6
ಶರಣಾಗತಜನಪರಿಪಾಲಾ
ಕರುಣಾಲವಾಲಾ
ಕರುಣಿಸೆನ್ನನು ಹೇ ಶಿರಿಲೋಲಾ
ನಮಿತಜನಸುgಸಾಲ
ಶಿರಿ ಅಜ ಭವ ಸುರ ನಿಕರಾರ್ಚಿತಪದ
ಸರಸಿಜಯುತ ನೀ ಸುರವರದೇವಾ 7
ಪನ್ನಗಗಿರಿ ನಿಜಕೃತವಾಸಾ
ಪೊರೆ ಎನ್ನನು ಶ್ರೀಶಾ
ಬಿನ್ನಪ ಮಾಳ್ಪೆನು ಹೇ ಶ್ರೀನಿವಾಸಾ
ಕೊಡು ಎನಗೆ ಲೇಸಾ
ಎನ್ನ ಸಲಹೋದಕೆ ಅನ್ಯರ ಕಾಣೆನೊ
ಮನ್ನಿಸು ನೀನಾಪನ್ನಜನಸುಖದಾ 8
ಲಕ್ಷ್ಮೀನಾಯಕ ವರಪಕ್ಷಿಗಮನಾ
ಅಕ್ಷಯ ಫಲವನ್ನ
ರಕ್ಷಿಸಿ ಕಾಯ್ವದೋ ನೀ ಎನ್ನಾ
ಲಕ್ಷ್ಮಣನಣ್ಣಾ
ಅಕ್ಷರಕ್ಷರವಿಲಕ್ಷಣ ಕರುಣ ಕ -
ಟಾಕ್ಷದಿ ಎನ್ನ ವೀಕ್ಷಿಸು ಕ್ಷಣ ಕ್ಷಣ..... 9
ಧರ್ಮಾರ್ಥಕಾಮಮೋಕ್ಷವ ನಾನೊಲ್ಲೇ
ಕರ್ಮದ ಸುಳಿಯಲ್ಲೇ
ಮರ್ಮವ ತಿಳಿಯದೆ ಬೀಳುವೆ ನಾನಲ್ಲೇ
ನಿರ್ಮಿಸದಿರು ಎನ್ನಲ್ಲೇ
ಕರ್ಮಭವದ ಮಹÀ ಮರ್ಮವ ತಿಳಿಸೀ
ದುರ್ಮನ ಬಿಡಿಸೆಲೊ ಬೊಮ್ಮನ ತಾತಾ 10
ದಿಟ್ಟ ಗುರು ಜಗನ್ನಾಥವಿಠಲ
ನಾನನಾಥಾ
ಥಟ್ಟಾನೆ ನೀ ಎನ್ನನು ಕಾಯೋ ಶ್ರೀನಾಥಾ
ಇಷ್ಟೇ ಎನಮನದರ್ಥ
ಸೃಷ್ಟಿಯೊಳಗೆ ಬಹು ಭ್ರಷ್ಟರಸ್ತುತಿಸಿ ನಿ -
ಕೃಷ್ಟನಾದೇನೋ ಶ್ರೇಷ್ಠ ಮೂರುತೀ 11
***