..
ಕರ್ಪೂದಾರುತಿ ತಾರೆ ಕೊಪ್ಪರದಪ್ಪನಿಗೆ
ಸರ್ಪಸುತಲ್ವಗೆ ಮುಪ್ಪಾದ ದೇವನಿಗೆ ಅಪ್ರತಿಮರಿಹಿಮೆಗೆ ಪ
ನೀರೆ ನಲುವಿಂದಲಿ ನೀಮುದದಿಂದಲಿ | ಸಖಿ ನಿಜಮನದಲಿ ಅ.ಪ
ಫಾಲಾಕ್ಷ ವಂದಿತಪಾದ
ಪಾಲಾಬ್ಧಿವಾಸಗೆ | ಪಾಂಚಾಲಿವರದರಂಗಗೆ |
ಶಿಶುಪಾಲ ಖರಮುರ ಹಾರಿಗೆ |
ಕಾಳಿಂಗನ ಫಣೆಯಲ್ಲಿ ತಥೈವಿಎಂದು ಕುಣಿದವಗೆ |
ಬಾಲೆಯರಾಲಯ ಪೊಕ್ಕು ಪಾಲು ಬೆಣ್ಣೆ ಕದ್ದವಗೆ |
ಗೋಪಾಲಕೃಷ್ಣನಿಗೆ ನೀರೆ ನಲುವಿಂದಲಿ |
ನೀ ಮುದದಿಂದಲಿ | ಸಖಿ ನಿಜಮನದಲಿ 1
ದೇವಾಧಿದೇವನಾದ ಭಾವಜನಯ್ಯನಿಗೆ |
ವÀಸುದೇವದೇವಕಿ ಕಂದಗೆ ಭೂದೇವೌಕ್ಷವಂದ್ಯಗೆ |
ಪಾವನ್ನ ಮೂರುತಿಯಾದ ಶ್ರೀದೇವಿ ಅರಸಗೆ |
ಗೋವಳರಿಂಧ ಕೂಡಿ ಗೋಹಿಂಡು ಕಾಯ್ದವಗೆ |
ದೇವಾರಿ ವೈರಿಗೆ ಶ್ರೀವಾಸುದೇವಗೆ 2
ಮಂಗಳಾಂಗ ಗಂಗಾಜನಕ |
ತುಂಗವಿಕ್ರಮದೇವಗೆ | ಜಯ
ಸಂಗೀತ ಪ್ರಿಯಲೋಲಗೆ | ಪತಂಗಜವೈರಿ ದೇವಗೆ
ಶೃಂಗಾರದಿ ಶಾಮಸುಂದರ ಗಾಂಗೆಯಂಬರಧಾರಿಗೆ 3
***