Showing posts with label ಈಸಬೇಕು ಇದ್ದು ಜೈಸಬೇಕು purandara vittala EESABEKU IDDU JAISABEKU. Show all posts
Showing posts with label ಈಸಬೇಕು ಇದ್ದು ಜೈಸಬೇಕು purandara vittala EESABEKU IDDU JAISABEKU. Show all posts

Friday 3 December 2021

ಈಸಬೇಕು ಇದ್ದು ಜೈಸಬೇಕು purandara vittala EESABEKU IDDU JAISABEKU



ಈಸಬೇಕು-ಇದ್ದು ಜೈಸಬೇಕು| 
ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| 

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು 
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| 

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| 
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ಭಕುತರೆಲ್ಲ ||೨|| 

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂತೆ | 
ಮೋಸ ಹೋಗದ್ಹಾಂಗೆ ಜಗದೀಶ ಪುರಂದರವಿಠಲನೆನುತ ||೩||
***

ರಾಗ : ಧನ್ಯಾಸಿ  ತಾಳ : ಆದಿ (raga tala may differ in audio)

Isabeku iddu jayisabeku
Hesige samsaradalli Ase lesa idad~ha0ge ||pa||

Tamarasa jaladamte
Premavittu bavadolu
Svami ramanenuta padi
Kamita kaigombarella ||1||

Geru hanninalli bija
Serida0te samsaradi
Miri Ase madadamte
Dhira krushnana Bakutarella ||2||

Mamsadasege matsya siluki
Himsepatta pariyamte
Mosa hogad~ha0ge jaga-
Disa puramdaravithalana nenedu ||3||
***

pallavi

IsabEku idda jayisabEku

anupallavi

hEsige samsAradalli AsalEsha iDadhAge

caraNam 1

tAmarasa jaladante prEmaviTTu bhavadoLu svAmi rAma enuta pADi kAmita kai kombarella

caraNam 2

gEru haNNinalli bIja sEridante samsAradi mIriyAse mADadale dhIra krSNana bakutarella

caraNam 3

mAmsa dAsage matsya siluki himsepaTTa pariyante mOsa hOgadhAge jagadIsha purandara viTTalana nenedu
***


ಈಸಬೇಕು ಇದ್ದು ಜಯಿಸಬೇಕು ||ಪ||
ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ ||ಅ.ಪ.||

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿಯಾಸೆ ಮಾಡದಲೆ ಧೀರಕೃಷ್ಣನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು
*****


ಈಸಬೇಕು ಇದ್ದು ಜಯಿಸಬೇಕು

ಪುರಂದರ ದಾಸರದು ಬರೆದು ಕಟ್ಟಿಡುವ ಸಾಹಿತ್ಯವಲ್ಲ. ದೇಶ ಕಾಲದ ಸಾಣಿಕಲ್ಲ ಮೇಲೆ ಅನುಭವದ ಕೊರಡು ತೇಯ್ದ ಗಂಧ. ಮಧುಕರ ವೃತ್ತಿಯಿಂದ 'ಮುತ್ತು ಬಂದಿದೆ ಕೊಳ್ಳಿರೋ' ಎಂದು ಹಾಡಿದರೆ ಮನೆ ಮನ ಎರಡೂ ತುಂಬಿದವು.

ಈಸಬೇಕು ಇದ್ದು ಜಯಿಸಬೇಕು ಎಂಬುದು ಅವರ ಪ್ರೇರಣಾದಾಯಿ ವಾಕ್ಯ.

ಜೀವನ ಮತ್ತು ಸಮಸ್ಯೆಗಳಿಗೂ ಗೇರು ಮತ್ತು ಬೀಜದ ಸಂಬಂಧ. ಕಷ್ಟಗಳೆಂಬ ಗೇರಿನಿಂದ ಹೊರಬಂದಾಗ ಗೋಡಂಬಿ. 
ಹೀಗೆ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬೇಕು. ಓಡಿ ಹೋಗಬಾರದು. ಹೊರಹೋಗುವ ವಿಚಾರಮಾಡದೆ ಕೊಳೆಸಿ ಮದ್ಯವಾಗಬಾರದು.

ಆತ್ಮಹತ್ಯೆಗೆ ಶರಣಾಗುವ ಎಷ್ಟೋ ಜನರು ಒಂದು ಬಾರಿ ಮುಂದಕ್ಕೆ ಹಾಕಿದರೆ ನೂರು ವರ್ಷ ಆಯಸ್ಸು. ಸಮಸ್ಯೆ ಅವಮಾನ ವ್ಯಾಧಿ ಮನುಷ್ಯರಿಗೆ ಆಗದೇ ಮರಕ್ಕಾ? ಸಣ್ಣ ವಿಷಯಕ್ಕೆ ದುಡಿಕಿ ಸರಿಪಡಿಸಲಾಗದ ಘಾಸಿ ಮಾಡಿ ಎದ್ದು ಹೋದವರಿದ್ದಾರೆ

ಅತಿ ಸಣ್ಣ ವಿಷಯಕ್ಕೆ ಮನಸ್ತಾಪಕ್ಕೆ ಡೈವೋರ್ಸ್ ಕೊಟ್ಟು ಕೊಳ್ಳುವ ನಿರ್ಧಾರ ಮಾಡಿದವರಿದ್ದಾರೆ.

ದಾಸರು ಪರಿ ಪರಿಯಿಂದ ಹೇಳಿದ್ದು ಈಸಬೇಕು ಇದ್ದು ಜಯಿಸಬೇಕು.

ಸಮಸ್ಯೆಗಳು ಎಲ್ಲಿಲ್ಲ?  ಕೆಲಸದಲ್ಲಿ, ಕುಟುಂಬದಲ್ಲಿ, ಜೀವನದಲ್ಲಿ ಸಮಾಜದಲ್ಲಿ, ಧರ್ಮದಲ್ಲಿ, ದೇಶದಲ್ಲಿ, ಪ್ರಪಂಚದಲ್ಲಿ ಎಲ್ಲಾಕಡೆ ಇವೆ. ಮನುಷ್ಯ ಮತ್ತು ಸಮಸ್ಯೆಗಳ ಸಂಬಂಧ ಮೀನು ನೀರಿನಂತೆ. ನೀರೊಳಗೆ ಇರಬೇಕು ಕೊಳೆ ತೊಳೆಯಬೇಕು.

ಮೀನುಗಾರ ತೋರಿಸಿದ ಗಾಳದ  ತುದಿಯ ಮಳೆಹುಳುವಿಗೆ ಮರುಳಾಗಬಾರದು, ಮತಾಂತರವಾಗಬಾರದು. ದೇಶ ಬಿಡುತ್ತೇನೆ ಎನಬಾರದು. ಸೋಡಚೀಟಿ ಕೊಡುವ ವಿಚಾರ ಮಾಡಬಾರದು. ಎಲ್ಲವುಗಳನ್ನು ಎದುರಿಸಿ ಈಸಿ ನಮ್ಮ ದಡ ತಲುಪಿ ಜಯಿಸಬೇಕು.

ಸಾಧಿಸಲು ಒಂದು ಸಣ್ಣ ಅವಕಾಶ ಇದ್ದಾಗಲೂ ನಿವೃತ್ತಿ ಮಾರ್ಗ ಸಲ್ಲ. ತುಂಬು ಬಾಳು ಇದ್ದು ಸಾಮ, ದಾನ, ದಂಡ, ಬೇಧ ಇವುಗಳಿಂದ ಗೆದ್ದು ಈಸಬೇಕು ಇದ್ದು ಜಯಿಸಬೇಕು ಎಂಬುದು ದಾಸರ ಸಂದೇಶ.
******