Showing posts with label ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ rajesha hayamukha. Show all posts
Showing posts with label ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ rajesha hayamukha. Show all posts

Thursday 5 August 2021

ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಕಾಯೋ ಪ್ರಾಣೇಶ ಕೀಶಕುಲೇಶ

ವಾಯುಸುತನೆಂದು ಮೆರೆವ ಜೀವೇಶ ಪ


ಅಂಜನಾದೇವಿಯೊಳ್ ಜನಿಸಿಕೊಂಡಿರುವಿ

ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ

ಸಂಜೀವನವ ತಂದು ಕಪಿಗಳನುಳಿಸಿದಿ

ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ 1


ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ

ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ

ಪಂಥದಿ ಮಗದಾಧಿಪತಿಯ ಸಂಹರಿಸಿ

ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ2


ಪಾಜಕ ಕ್ಷೇತ್ರದೊಳ್ ನೀನವತರಿಸಿ

ರಾಜತಾಸನದಿ ಶ್ರೀಕೃಷ್ಣನನಿರಿಸಿ

ರಾಜೇಶ ಹಯಮುಖ ಕಿಂಕರನೆನಿಸೀ

ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ 3

***