Showing posts with label ಶರಣು ಮುನಿಪಮಣಿಯೆ ಸುಮತೀಂದ್ರ prasannavenkata SHARANU MUNIPMANIYE SUMATEENDRA TEERTHA STUTIH. Show all posts
Showing posts with label ಶರಣು ಮುನಿಪಮಣಿಯೆ ಸುಮತೀಂದ್ರ prasannavenkata SHARANU MUNIPMANIYE SUMATEENDRA TEERTHA STUTIH. Show all posts

Sunday, 17 November 2019

ಶರಣು ಮುನಿಪಮಣಿಯೆ ಸುಮತೀಂದ್ರ ankita prasannavenkata SHARANU MUNIPMANIYE SUMATEENDRA TEERTHA STUTIH

Audio by Vidwan Sumukh Moudgalya


ಶ್ರೀ ಪ್ರಸನ್ನವೆಂಕಟದಾಸರ ರಚನೆ 

 ರಾಗ : ಮಧ್ಯಮಾವತಿ       ಆದಿತಾಳ 

ಶರಣು ಮುನಿಪಮಣಿಯೆ ಸುಮತೀಂದ್ರ
ಕರುಣಾಮೃತದ ಖಣಿಯೆ
ಶರಣೆಂದವರಿಗೆ ವರಚಿಂತಾಮಣಿಯೆ
ಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ   ॥ಪ॥

ಸಂತತ ಸೇವಕ ಸಂತರಿಗೊಲಿದೀಗ
ಸಂತತಿ ಸಂಪದವಿತ್ತೆ ಬೇಗ
ಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿ-
ಶ್ರಾಂತಿಯಮಿತ ದಿಗಂತಕೆ ವಾರ್ತಿ ॥೧॥

ತಾಳ ತಮ್ಮಟೆ ಕಂಬು ಕಾಳೆ ಬಿರುದು ಬುಧ
ಮೇಳದಿಂ ಶಿಷ್ಯ ಜನಾಲಯಕೆ ಸಾಲುದೀವಿಗೆ-
ಯೊಳು ಮಾಲಿಕೆ ಗ್ರಹಿಸಿ ಆಂದೋಳಿ-
ಕಿಳಿದು ಬಂದು ಪಾಲಿಪೆ ಅವರ ॥೨॥

ಶ್ರೀಶ ಪ್ರಸನ್ನವೆಂಕಟಾಚಲವಾಸ ರಾಮನ ಪಾದ
ನಿಶಿದಿನಾರ್ಚಿಸುವೆ ಸಂತೋಷ ಸಾಂದ್ರ
ಋಷಿಯೋಗೀಂದ್ರರ ಕರ ಬಿಸಜಜ ಯೋಗೀಂದ್ರ
ಸುಶರಧಿ ಸಂಭವ ಶಶಿ ಸುಮತೀಂದ್ರ ॥೩॥
***

SaraNu munipamaNiye sumatIndra
karuNAmRutada KaNiye
SaraNendavarige varacintAmaNiye
dhareya mElinobba dore ninageNeye ||pa||

santata sEvaka santarigolidIga
santati saMpadavitte bEga
SAnta SuBaguNa vasantaneMbo kIrti vi
SrAntiyamita digantake vArti ||1||

tALa tammaTe kaMbu kALe birudu budha
mELadiM SiShya janAlayake sAladIvige
yoLu mAlike grahisi AndOLi
kiLidu bandu pAlipe avara ||2||

SrIguru prasannavenkaTAcalavAsa rAmana pAda
niSidinArcisuve saMtOSha sAMdra
RuShiyOgIndrara kara bisajaja yOgIndra
suSaradhi saMBava SaSi sumatIndra ||3||
***

by ಪ್ರಸನ್ನವೆಂಕಟದಾಸರು
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.

ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1

ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2

ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
*******