..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ದೇವಾಧಿದೇವ ಶ್ರೀ ತ್ರಿವಿಕ್ರಮರಾಯ
ದ್ಯಾವಾ ಮ್ಯಾಲ್ನಿನ್ನ ಕಾಯ ||
ಪಾದನಖಾಗ್ರದಿ ಬ್ರಹ್ಮಾಂಡವನ್ನು
ಭೇದಿಸಿ ಗಂಗೆಯ ಜನಿಸಿರ್ದ ಕಾಯ ಪ
ಅಣುರೂಪದಿಂದಿದ್ದು ಕ್ಷಣದೊಳಗದ್ಭುತ
ರೂಪವ ಧರಿಸಿ ಬಲಿಯ ಬಂಧಿಸಿದೆ |
ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ
ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ 1
ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್
ನಿಂತಿದ್ದ ತೆರವತಿ ಚೋದ್ಯವಾಗಿಹುದು |
ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು
ಹರಿಭಕ್ತರ್ಗತಿ ತೋರ್ಪ ಕಾರ್ಯ 2
ಕಂಜಾಕ್ಷ ಶ್ರೀಕೃಷ್ಣಗೋಲೆಯರ್ಪಿಸಿದ
ರಾಜೇಶ ಹಯಮುಖ ದಾಸರೆಂದೆನಿಪ |
ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ
ದೇವಾಧಿದೇವ ಶ್ರೀ ತ್ರಿವಿಕ್ರಮರಾಯ 3
***