ರಾಗ ಮಾಂಜಿ ಅಟತಾಳ
ಯಾರಮ್ಮ ಮಾತ ಸಾರಮ್ಮ ||ಪ||
ದೂರಮಾರ್ಗದಿ ಬಂದು ದುಃಖ ಬಹಳವಮ್ಮ
ನೀರನ್ನವಾದರು ಸಾರಾಮೃತವಮ್ಮ ||ಅ||
ಪತಿಗಳ ಕಾಣದೆ ಪಥಪಥ ಹುಡುಕುತ್ತ
ಅತಿಶಯದಲಿ ನಿನ್ನ ಹತ್ತಿರ ಬಂದೆವಮ್ಮ ||
ಬಹಲ ಕಾಲ ವ್ಯಾಳವೇಣಿಯ ಪತಿಗಳ
ಬಹಳ ಕದನ ಮಾಡಿ ಲೋಲಾಕ್ಷಿ ಪೊರಟರೆ ||
ಪುರಂದರವಿಠಲನ ಕರುಣಕೆ ಪಾತ್ರರು
ಮರೆತು ಪೋಗದೆ ನಮ್ಮ ಕರುಣಿಸಿ ಪೊರೆಯಮ್ಮ ||
***
ಯಾರಮ್ಮ ಮಾತ ಸಾರಮ್ಮ ||ಪ||
ದೂರಮಾರ್ಗದಿ ಬಂದು ದುಃಖ ಬಹಳವಮ್ಮ
ನೀರನ್ನವಾದರು ಸಾರಾಮೃತವಮ್ಮ ||ಅ||
ಪತಿಗಳ ಕಾಣದೆ ಪಥಪಥ ಹುಡುಕುತ್ತ
ಅತಿಶಯದಲಿ ನಿನ್ನ ಹತ್ತಿರ ಬಂದೆವಮ್ಮ ||
ಬಹಲ ಕಾಲ ವ್ಯಾಳವೇಣಿಯ ಪತಿಗಳ
ಬಹಳ ಕದನ ಮಾಡಿ ಲೋಲಾಕ್ಷಿ ಪೊರಟರೆ ||
ಪುರಂದರವಿಠಲನ ಕರುಣಕೆ ಪಾತ್ರರು
ಮರೆತು ಪೋಗದೆ ನಮ್ಮ ಕರುಣಿಸಿ ಪೊರೆಯಮ್ಮ ||
***
pallavi
yAramma mAta sAramma
anupallavi
dUra mArgadi bandu dukkha bahaLavamma nInnavAdaru sArAmrtavamma
caraNam 1
patigaLa kAnade patha patha huDukutta atishayadali ninna hattira bandevamma
caraNam 2
bahaLa kAla vyALavENiya patigaLa bahaLa kadana mADi lOlAkSi poraDare
caraNam 3
purandara viTTalana karuNake pAtraru maredu pOgade namma karuNisi poreyamma
***