ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ ಗುರುಸತ್ಯಬೋಧರಾಯಾ
ಕರುಣಿಗಳರಸನೆ ತರಳನ ಮೊರೆ ಕೇಳಿ ಪೊರೆವುದು ಎನ್ನ ಜೀಯಾ ಪ
ಬೇಡಿಕೊಳ್ಳಲು ಬಾಯಿಬಾರದೋ ನಾ ಹಿಂದೆ ಮಾಡಿದಪರಾಧವ
ನೋಡದೆ ಎನ್ನವಗುಣ ಕೈಯಪಿಡಿದು ಕಾಪಾಡಲು
ನಿನಗೀಡೆ ದಯಮಾಡೆ 1
ಪುಟ್ಟದ ಪುಟಕ್ಕಿಕ್ಕಿದ ಚಿನ್ನದಂತಿಹ ಶ್ರೇಷ್ಠ ವೈಷ್ಣವ ಕುಲದಿ
ಭ್ರಷ್ಟ ಮಾಡಿದೆ ಬಾಳು ಪೇಳಲೇನು ದಯದೃಷ್ಟಿ
ಇಡುವುದೆನ್ನೊಳು ದಯಾಳು 2
ಮರುತ ಮತವ ನಂಬಿ ನಡೆವರ ಪದಧೂಳಿ ಧರಿಸುವ ಭಾಗ್ಯವನೇ
ಗುರುವರ್ಯ ಕರುಣಿಸು ಹನುಮನಯ್ಯನ ಪಾದಸರಸಿಜಭೃಂಗ
ನೀನು ಸುರಧೇನು 3
****