Showing posts with label ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು vijaya vittala. Show all posts
Showing posts with label ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು vijaya vittala. Show all posts

Wednesday, 16 October 2019

ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು ankita vijaya vittala

ವಿಜಯದಾಸ
ವಲ್ಲಭೆ ಬಲು ಸುಲಭೆ ಪ
ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ
ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ 1

ಕೋಲ ಮುನಿಗೊಲಿದಮಲ ಮೃಗನಾಭಿ
ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ
ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2

ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ
ರವರವ ನರಕದಲ್ಲಿ ಬವಣೆಪಟ್ಟ ಮೇಲೆ
ಸವಿಯದಂತೆ ತಮಸುನಿವಹದೊಳಗೆ ಇಪ್ಪನು 3

ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ
ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು
ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ 4

ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ
ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ 5
********