Showing posts with label ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ kamalanabha vittala. Show all posts
Showing posts with label ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ kamalanabha vittala. Show all posts

Thursday, 5 August 2021

ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ankita kamalanabha vittala

 ..

kruti by Nidaguruki Jeevubai

ಬಾರೆ ಪಾರ್ವತಿ ಸಾರೆ ಸುಖವ

ತೋರೆ ನಿನ ದಯವ ಪ


ಬಾರಿ ಬಾರಿಗು ಪ್ರಾರ್ಥಿಸುವೆನೆ

ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ


ದಕ್ಷಕುವರಿಯೆ ಈಕ್ಷಿಸೆನ್ನನು-

ಪೇಕ್ಷೆ ಮಾಡದಲೆ

ಅಕ್ಷಿತ್ರಯನ ಸತಿಯೆ ಭಕ್ತರ

ಕಷ್ಟ ಬಡಿಸುತಲಿ

ಸೂಕ್ಷ್ಮ ಮತಿಯನಿತ್ತು ಕೃಷ್ಣನ

ಸ್ತೋತ್ರಗಾನದಲಿ ಅ-

ಪೇಕ್ಷೆಯೊದಗುವ ಮನವ ಪಾಲಿಸು

ರಕ್ಷಿಸೀಗಲೆ ಭಕ್ತವತ್ಸಲೆ 1


ಮಂದಗಮನೆ ಮತ್ತೊಂದು ಪೇಳುವೆ

ನಂದಿವಾಹನನಾ

ಮುಂದೆ ಸ್ತುತಿಪ ಭಕ್ತವೃಂದ ವಿ-

ದೆಂದು ಪೇಳಿದೆ ನಾ

ಸುಂದರ ಶ್ರೀ ಹರಿಯ ಸೇವೆಗೆ

ಪೊಂದಿಸೆನ್ನ ಮನ

ಚಂದದಿಂದ ಪ್ರಾರ್ಥಿಸುವೆನೆ

ಸುಂದರಾಂಗಿಯೆ ನಿನ್ನನನುದಿನ 2

ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ

ಕಮಲಸಂಭವ ಭವಸುರಾರ್ಚಿತನ

ಸ್ಮರಿಸುವ ಮತಿ ಹೃ-

ತ್ಕಮಲದೊಳಗೆ ನಿಲಿಸುವಂತೆ

ಮಾಡು ಸದ್ಗತಿ

ಕಮಲನಾಭ ವಿಠ್ಠಲ ಕೊಡುವ

ನೆನುತ ಕೀರುತಿ 3

***