Showing posts with label ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ vijaya vittala. Show all posts
Showing posts with label ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ vijaya vittala. Show all posts

Thursday, 17 October 2019

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ankita vijaya vittala

ವಿಜಯದಾಸ
ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ಪ

ಬಂದು ನಿಲ್ಲೋ ನಿನಗೊಂದಿಸುವೆನು ಗೋ
ವಿಂದ ಗೋವಳರಾಯ ಸಂದೇಹಗೊಳಿಸದೆ ಅ.ಪ

ಸದೋಷಕ ನಾನು ಸದಾ ನಿರ್ಮಲ ನೀನು
ಪದೆಪದೆಗೆ ಪೇಳುವುದುಚಿತವಲ್ಲ 1

ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ
ಘನಮಹಿಮನೆ ಮಧ್ವಮುನಿ ಮನ ಮಂದಿರ 2

ಕಡೆಗೋಲು ನೇಣಪಿಡಿದ ಪರಮಾನಂದ
ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ3
***

pallavi

bandu nillO dayAnidhE

anupallavi

bandu nillO ninagondisuvenu gOvindA gOvaLarAya sandEhagoLisade

caraNam 1

sadOSaka nAnu sadA nirmala nEnu padOpadesadge pELuducitavEnO

caraNam 2

manadoLu poLedu cintanege neleyAgi ghana mahimane madhvamuni mana mandirA

caraNam 3

kaDugOla nEna piDida paramAnanda uDupiya siri krSNa vijayaviThalarEya
***

ವಿಜಯದಾಸ
ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ ||
ಬಂದು ನಿಲ್ಲೊ ನಿನಗೊಂದಿಸುವೆ ಗೋ |
ವಿಂದ ಗೋವಳ ರಾಯ ಸಂದೇಹ ಮಾಡದೆ ಪ

ಸದೋಷಿಗ ನಾನು ಸದಾ ನಿರ್ಮಲ ನೀನು ||
ಪಾದೋಪಾದಿಗೆ ಬೇಡಿಸುವದುಚಿತವಲ್ಲ 1

ಮನದೊಳು ಪೊಳದು ಚಿಂತನೆ ನೆಲೆಯಾಗಿ ||
ಘನಮಹಿಮನೆ ಮಧ್ವಮುನಿ ಮನಮಂದಿರ 2

ಕಡಗೋಲ ನೇಣ ಪಿಡಿದ ಪರಮಾನಂತ ||ಉಡುಪಿನ ಶ್ರೀಕೃಷ್ಣ ವಿಜಯವಿಠ್ಠಲರೇಯಾ 3
***