ಇಂದು ನೀ ಕರೆದು ತಾರೆ ಬೇಗನೆ ಪೋಗಿ
ಚನ್ನವೆಂಕಟರಾಯನ
ಮೊನ್ನೆ ಆಡಿದ ಮಾತು ಒಂದೂ ನಿಜವಲ್ಲಾ
ರನ್ನೆ ಈಗಲೆಪೋಗಿ ssssssಸನ್ನೆ ಮಾಡಿಬಾರೆ ಪ.
ಅಂಗಜನಯ್ಯನ ಕಾಣದೆ ನಾನು ಹಿಂಗಿರಲಾರೆ ನಮ್ಮಾ
ಕಂಬುಕುಚದ ಬಾಲೆ
ರಂಗನಾ ಕರತಾರೆ
ರಂಗು ಮಾಣಿಕದಹರಳುಂಗುರ ಕೊಡುವೆನು 1
ಕಾಲಿಗೆ ಎರಗುವೆನೆ
ಕೋಮಲಮುಖಿ ಆಲಸ್ಯ ಮಾಡದೆಲೆ
ನೀಲಕುಂತಳನೀರೆ | ಲೋಲನ ಕರತಾರೆ
ವಾಲೆಮೂಗುತಿ ಕಂಠಮಾಲೆಯ ಕೊಡುವೆನು 2
ಮರದಿರಲಾರೆನಮ್ಮಾ
ಬೇಗನೆಪೋಗಿ ನೆರವಂತೆ ಮಾಡು ನೀನು
ಯರವುತನವುಬ್ಯಾಡಾಮರೆಯಲಾರೆನೆ ನಿಮ್ಮಕರವಪಿಡಿವೆ ಹೆಳವನ ಕಟ್ಟೆರಂಗೈಯ್ಯನ3
****