Showing posts with label ಶಾರದೆ ಜಗದ್ಭರಿತೆ ಸರಸ್ವತೆ govinda. Show all posts
Showing posts with label ಶಾರದೆ ಜಗದ್ಭರಿತೆ ಸರಸ್ವತೆ govinda. Show all posts

Sunday, 17 November 2019

ಶಾರದೆ ಜಗದ್ಭರಿತೆ ಸರಸ್ವತೆ ankita govinda

by ಗೋವಿಂದದಾಸ
ಶಾರದೆ ಜಗದ್ಭರಿತೆ ಸರಸ್ವತೆ ||ಸಾರಸದ್ಗುಣಚರಿತೆವಾರಿಜೋದ್ಭವನ ಪಾದಾರವಿಂದಾರ್ಚಿತೆ |ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ |ಪ್ರಭಾಕರ ಪ್ರಭಾವದನೆ ಪ

ಇಭರಾಜಗಮನೆ| ಸದ್ಬುದ್ಧಿಪ್ರದಾಯಿನಿ |ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ 1

ತಾಯೆ ಮಯೂರ ವಾಹಿನೀ | ಜಯ ಜಯ ಜಗ -|ನ್ಮಾಯೆ ಮೋಹನ ರೂಪಿಣೀ ||ತೋಯಜಕುಸುಮದಳಾಯತ | ಲೋಚನೆ |ಕಾಯೇ ದಯದಿಭವಹೇಯವಿದಾರಿಣಿ 2

ನೀತೆ ಪರಮಪುನೀತೆ | ಪಾಲಿಸು ಲೋಕ |ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ |
********