Showing posts with label ದಾಸರಾಯ ವಿಜಯದಾಸರಾಯ ದೋಷವೆಣಿಸದೆ ಸದಾ ಪೋಷಿಸು ಕರುಣದಿ shyamasundara vijaya dasa stutih. Show all posts
Showing posts with label ದಾಸರಾಯ ವಿಜಯದಾಸರಾಯ ದೋಷವೆಣಿಸದೆ ಸದಾ ಪೋಷಿಸು ಕರುಣದಿ shyamasundara vijaya dasa stutih. Show all posts

Wednesday, 1 September 2021

ದಾಸರಾಯ ವಿಜಯದಾಸರಾಯ ದೋಷವೆಣಿಸದೆ ಸದಾ ಪೋಷಿಸು ಕರುಣದಿ ankita shyamasundara vijaya dasa stutih

 ..

ದಾಸರಾಯ ವಿಜಯದಾಸರಾಯ |

ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ


ಸಕಲಜಗತ್ತಿಗೆ ಲಕುಮೀಶಪರೆನೆಂದು

ಮಖವಾಚರಿಪ ಮುನಿ ನಿಕರಕೆÉ ಸಾರಿದ 1


ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ |

ಮಾನಸ ಕುಮುದಕೆÉ ಏಣಾಂಕನೆನಿಸಿದ 2


ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ

ವಿಧ ವಿಧ ರಚಿಸಿದ ಸದಮಲ ಸುಚರಿತ್ರ 3


ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ |

ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ 4


ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ

ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ 5


ತಪ್ಪದೆ ಭಕ್ತಿಲಿ ಬರುವ ಭಕ್ತರಿಗೆಲ್ಲ

ತಪ್ಪು ಮನ್ನಿಸಿ ಭಜಿಪಭಕ್ತರಿಗೊಲಿದು

ಪೊರೆವ ಚಿಪ್ಪಶಿಖರನಿಲಯ 6


ಪಾಮರನಾದೆನಗೆ ಶಾಮಸುಂಧದರ ಸ್ವಾಮಿ

ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ 7

***