Showing posts with label ಸಾಮಜ ವರದಗೆ ಮಾಮನೋಹರಗೆ guruvijaya vittala. Show all posts
Showing posts with label ಸಾಮಜ ವರದಗೆ ಮಾಮನೋಹರಗೆ guruvijaya vittala. Show all posts

Friday, 27 December 2019

ಸಾಮಜ ವರದಗೆ ಮಾಮನೋಹರಗೆ ankita guruvijaya vittala

..by modalakallu sheshadasaru

ಸಾಮಜ ವರದಗೆ
ಮಾಮನೋಹರಗೆ
ಕಾಮನ ಪಿತ ಶಾಮವರ್ಣ ಶ್ರೀಹರಿಗೆ
ವಾಮದೇವನ ಸಖ ಸೋಮವದನ ಹರಿಗೆ
ಕಾಮಿನಿ ಸತ್ಯಭಾಮ ಪತಿಗೆ ಹೊಸ
ಹೇಮದಾರುತಿಯ ಬೆಳಗಿರೆ 1

ಲಕ್ಷ್ಮೀಯ ಅರಸಗೆ ಪಕ್ಷಿವಾಹನಗೆ
ಮೋಕ್ಷದಾಯಕ ಪಾಂಡವ ಪಕ್ಷ ಶ್ರೀಹರಿಗೆ
ವಕ್ಷಸ್ಥಳದಿ ಲಕ್ಷ್ಮೀಯ ಪೊರೆವ
ಕುಕ್ಷಿವಳಗೆ ಜಗವ ರಕ್ಷಿಸುವ ಹರಿಗೆ
ಲಕ್ಷದಾರತಿಯ ಬೆಳಗಿರೆ 2

ಭೋಗಿ ಶಯನಗೆ
ಬೇಗದಿಂದಲಿ ಭಕ್ತರ ಪೊರೆವಗೆ
ವಾಗೀಶವಂದ್ಯ ಶ್ರೀ ಗುರು ವಿಜಯವಿಠ್ಠಲ
ಮಂಗಳ ಮಹಿಮ
ತುಂಗ ಚರಿತ ಹರಿಗೆ ಮಂಗಳಾರುತಿಯ ಬೆಳಗಿರೆ 3
*********