..
kruti: tandevaradagopala vittala (ಪ್ರಹ್ಲಾದಗೌಡರು)
ಬಾರೆ ಸಖಿ ಪೋಗೋಣ ಬಾಯೆದ್ದು ಪೋಗೋಣ ಬಾ ಪ
ಶೆಳೆಯ ಬ್ಯಾಡ ಸೀರೆನುಡುವೆ ಕರವಬಿಡೊ ಕೈಯ್ಯ ಮುಗಿವೆ ಪ್ರಾಣ ಪ್ರೀಯಾ ಅ.ಪ.
ಚಪಲಮುಖಿಯೆ ಚಪಲವಾಗಿದೆ ನಿಲ್ಲದೆ ಹೋಗೋಣ ಪ್ರಿಯಚಾಪಲ್ಯರಹಿತ ಪೂರ್ಣ ಚಲ್ವ ನಿಲ್ಲೋ ನಿಲ್ಲೋ ನಿಲ್ಲದೇ ಪ್ರಿಯಾ1
ಮದನ ಬಾಣಕೆ ಬೆದರಿ ಬಂದೆ ಕುದುರೆನೇರಿ ಬೇಗ ಮದನನಯ್ಯ ಬದರಿವಾಸಿ ಪದರಬಿಡೊ ಪ್ರಿಯಾ2
ದುಂಡುಮುಖಿಯೆ ಗುಂಡುಕುಚವ ಕಂಡು ಮನವ ನಿಲ್ಲದು ಬೇಗ ಕೋದಂಡಪಾಣಿ ತಂದೆವರದಗೋಪಾಲವಿಠ್ಠಲದಂಡ ಪುರುಷ 3
***