ಪ್ರೀತಿಪಾತ್ರ ಬುಧೇಂದ್ರ ಪ
ಸತ್ಯಪ್ರಿಯರ ಕುವರಾ ನಿಜ ಭೃತ್ಯರ ಪಾಲಿಪ ಚತುರಾ
ಚಿತ್ತದೊಳೊಮ್ಮೆ ಸ್ಮರಿಪೆ ಪದಕಮಲವ ಮೃತ್ಯು
ಭಯವ ಕಳೆವುತ್ತ ಪೊರೆದೆ 1
ವಿಷವನುಂಡರಗಿಸಿಕೊಂಡ ಧೀರಾ ವೃಷಕೇತು ಪಿತ ಭಕ್ತ ಶೌಂಡಾ
ವಿಷಮ ಬುದ್ಧಿಯಲಿ ವಾದಿಸ ಬಂದ ವಾದಿಗಳ
ಉಸಿರೆತ್ತಗೊಡದೆ ಸಾಧಿಸಿದೆ ಮಧ್ವಶಾಸ್ತ್ರ 2
ಚರಣಕ್ಕೆ ಶರಣೆಂಬೆನಯ್ಯ ಎನ್ನ ಕರುಣದಿ ಪಾಲಿಸು ಜೀಯಾ
ಸಿರಿ ಹನುಮೇಶವಿಠಲನ ಪಾದ ಭೃತ್ಯರ ಚರಣ ಕಿಂಕರನ
ಕಿಂಕರನೆನಿಸುವದೆನ್ನ 3
****