ಪುರಂದರದಾಸರು
ನೀನಲ್ಲದೆ ನನಗಾರಿಲ್ಲ ಗೋವಿಂದ ನೀನಲ್ಲದೆ ಇಹಪರವಿಲ್ಲ ಪ
ಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1
ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2
ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
********