Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀ ಭೂಮಿ hayavadana. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀ ಭೂಮಿ hayavadana. Show all posts

Wednesday, 1 September 2021

ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀ ಭೂಮಿ ankita hayavadana

 ..

ಜಯಮಂಗಳಂ ನಿತ್ಯ ಶುಭಮಂಗಳಂ ಪ.


ಮಂಗಳಂ ಶ್ರೀ ಭೂಮಿದೇವಿಯ ರಮಣಗೆ

ಮಂಗಳಂ ಸದ್ಗುಣಗಣಪೂರ್ಣಗೆ

ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ

ಮಂಗಳಂ ಶ್ರೀ ವೇಂಕಟಾಧೀಶಗೆ 1


ವಂದಾರು ಸುರವೃಂದ ರುಚಿರಮಣಿಮಯ ಮಕುಟ

ಸಂದೋಹ ಸಂಘಟಿತಪದಪೀಠಗೆ

ಇಂದಿರಾಕರಕಮಲರಂಜಿತ ಧ್ವಜವಜ್ರ

ಸಂದಿಪ್ಪ ಪಾದಾದಿ ಶುಭರೇಖಗೆ 2


ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ

ಭವ್ಯ ಮಂಗಳದಾಯಿ ಭಯಹಾರಿಗೆ

ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ

ಸೇವ್ಯ ಗಂಗಾಜನಕ ಶ್ರೀಚರಣಗೆ 3


ವರಕನಕವನಯುತ ಉರುನಿತಂಬದ್ವಯಗೆ

ಸರಸಕೇಳೀವಾಸಸಜ್ಜಘನಕೆ

ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ-

ತ್ಸರಸಿಜಾಸನಜನಿತ ಶುಭನಾಭಿಗೆ 4


ಭುವನ ಪೂರಿತ ವಳಿತ್ರಯರಾಜದುದರಗೆ

ವಿವಿಧ ಕುಸುಮಾಕಲಿತ ಸುಮಮಾಲಿಗೆ

ರವಿಮಂಡಲೋದ್ಭಾಸ ಕೌಸ್ತುಭ ಶ್ರೀವತ್ಸ

ನವಹಾರಕೃತ ರಮಾಶ್ರಿತ ವಕ್ಷಕೆ 5


ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ

ಶತ್ರುಭೀಷಣ ಘನಧ್ವನಿ ಶಂಖಕೆ

ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ

ಶ್ರಿತಜನ ಭಯಹಾರಿ ವರಪದ್ಮಕ್ಕೆ 6


ಸುರುಚಿ ಬಿಂಬಾಧರ ಸ್ಥಿತಿತ(?) ಕಂದರ ವದನಕೆ

ಸುರಭಿ ನಾಸಿಕ ಕಾಲ ಸನ್ಮುಖಕಮಲಕೆ

ಅರುವಾರಿಜನೇತ್ರ ಶೋಭನ ಭ್ರೂಯುಗಳ

ವರ ಫಾಲತಿಲಕ ಕುಂತಳರಾಯಗೆ 7


ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ

ವಿಮಲದರ್ಪಣ ಭಾಸ ಗಂಡಯುಗಕೆ

ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ

ರಮಣೀಯ ಗುಣರಚಿತ ವರ ಮಕುಟಕೆ 8


ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ

ಮದನಮದಗಜಶೀಲ ಲಾವಣ್ಯಕೆ

ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ

ಪದ ಹಯವದನ ವೆಂಕಟರಮಣಗೆ 9

***