.
ಶ್ರೀಕೃಷ್ಣಲೀಲೆ
ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ
ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1
ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2
ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3
ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4
ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5
ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6
ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7
ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8
ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9
ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10
ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11
ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12
ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13
ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14
ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15
ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16
ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
***