Showing posts with label ಪೇಳುವೆ ಮನವೆ ನಿನಗೊಂದು ಕುಳಿತು vijaya vittala. Show all posts
Showing posts with label ಪೇಳುವೆ ಮನವೆ ನಿನಗೊಂದು ಕುಳಿತು vijaya vittala. Show all posts

Wednesday, 16 October 2019

ಪೇಳುವೆ ಮನವೆ ನಿನಗೊಂದು ಕುಳಿತು ankita vijaya vittala

ವಿಜಯದಾಸ
ಪೇಳುವೆ ಮನವೆ ನಿನಗೊಂದು ಕುಳಿತು
ಲಾಲಿಪುದು ಮುಕ್ತಿಗೆ ಹಾದಿ ಎಂದು ಪ

ಹರಿಯ ಚರಣಾಬ್ಜ್ಬಕೆ ಎರಗು ಬಡ
ವರನ ಕಂಡರೆ ಅಕಟಾ ಎಂದು ಮರಗು
ಹರಿ ಭಕುತಿಗೆ ನೀನೆ ಕರಗು
ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1

ಅಹಂಕಾರ ಮಮಕಾರ ಬಿಟ್ಟು ಅಂಬು
ರುಹಲೋಚನನ ಸುಮತವನ್ನೆ ತೊಟ್ಟು
ಕುಹಕ ಮತಿಗಳನ್ನು ಬಿಟ್ಟು ಗುರು
ದ್ರೋಹಿಗಳಾದವರ ಹೃದಯವÀ ಮೆಟ್ಟು 2

ಅಲ್ಪ ಬುದ್ಧಿಗಳನ್ನು ಮಾಣು ಒಂದು
ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು
ಬಲ್ಪಂಥದಲಿ ಬಾಹದೇನು ಬಿಡು
ಅಲ್ಪಗಳ ಸಂಗ ಎಂದು ಸಾರಿದೆನು 3

ಸ್ವಾಮಿಯ ಪಾದವ ನೋಡು ನಿನ್ನ
ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು
ನಾಮ ಕೀರ್ತನೆಗಳನ್ನು ಪಾಡು ತ್ರಿ
ಧಾಮದೊಳಗೆ ಒಂದು ಇಂಬನೆ ಬೇಡು 4

ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು
ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ
ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
*********