..
ಕಾಡದಿರೆನ್ನನು ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ
ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ
ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ
ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1
ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ
ನಾರಿ ನೀನಾರೆಂದ್ವಿಚಾರಿಸುವೀ
ದೂರದಲ್ಲಿರುವಿ ಬದಿಯಲ್ಲಿ ಬರುವಿ
ಬೇರೆ ಕರೆವೆ ಈ ಬುದ್ಧಿ ತರವೆ 2
ವರ ಕದರುಂಡಲಗಿ ಹನುಮಯ್ಯನೊಡೆಯನೆ
ನಿನಗೆಣೆಯಿಲ್ಲವೊ ವನಜನಾಭಾ
ವನಿತೆಯರೆಲ್ಲಾ ಒಲಿಸಿದೆಯಲ್ಲಾ
ಮನುಜನಲ್ಲಾ ಮಾಯದ ಗೊಲ್ಲಾ 3
****