Showing posts with label ಪಾಲಿಸೋ ಶ್ರೀಹರಿ ಎನ್ನ ಪಾಲಿಸೊ ಪಾಲಿಸೊ ನಾ ನಿನ್ನ bheemesha krishna PAALISO SRIHARI ENNA PAALISO PAALISO NAA NINNA. Show all posts
Showing posts with label ಪಾಲಿಸೋ ಶ್ರೀಹರಿ ಎನ್ನ ಪಾಲಿಸೊ ಪಾಲಿಸೊ ನಾ ನಿನ್ನ bheemesha krishna PAALISO SRIHARI ENNA PAALISO PAALISO NAA NINNA. Show all posts

Saturday, 11 December 2021

ಪಾಲಿಸೋ ಶ್ರೀಹರಿ ಎನ್ನ ಪಾಲಿಸೊ ಪಾಲಿಸೊ ನಾ ನಿನ್ನ ankita bheemesha krishna PAALISO SRIHARI ENNA PAALISO PAALISO NAA NINNA

ಪಾಲಿಸೊ ಶ್ರೀಹರಿ ಎನ್ನ ಪಾಲಿಸೊ

ಪಾಲಿಸೊ ನಾ ನಿನ್ನ ಕಾಲಿಗೆ ಎರಗುವೆ

ಶ್ರೀಲೋಲ ನೀ ಹೃದಯಾಲಯದೊಳು ಬಂದು ಪ

ಸುರಮುನಿಗಳಿಗಿತ್ತ ಪರಿ ನಾಮಾಮೃತವನ್ನು

ಪರಮ ಔಷಧÀವೆಂದು ಸುರಿದು ಸುಖಿಸುವಂತೆ 1

ಸುಂದರ ಸುಗುಣನೊಂದೊಂದು ಗುಣದ ಮಾತ್ರೆ

ಸಂದೇಹವಿಲ್ಲದಾನಂದದಿಂದರೆದ್ಹಾಕಿ 2

ಭವರೋಗವೈದ್ಯ ಈ ಭವ ಬಂಧ ಬಿಡಿಸಿನ್ನು

ಅನುಮಾನವ್ಯಾತಕಾನಂತ ಹಸ್ತಗಳಿಂದ 3

ಲಕ್ಕುಮಿರಮಣನೆ ಲೆಕ್ಕಿಸೊ ಎನ ಮಾತು

ದುಷ್ಟ ಜ್ವರವ ನಿನ್ನ ಚಕ್ರದಿಂದ್ಹತಮಾಡಿ 4

ಭೀತಿ ಬಡುವೆನಯ್ಯ ಭೀಮೇಶಕೃಷ್ಣನೆ

ಯಾತಕೆ ತಡವಿನ್ನು ಪ್ರೀತಿಮಾಡೆನ್ನಲ್ಲಿ ಪಾಲಿಸೊ 5

***