Showing posts with label ಇನ್ಯಾತಕನುಮಾನವಯ್ಯಾ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ shreeda vittala. Show all posts
Showing posts with label ಇನ್ಯಾತಕನುಮಾನವಯ್ಯಾ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ shreeda vittala. Show all posts

Sunday, 1 August 2021

ಇನ್ಯಾತಕನುಮಾನವಯ್ಯಾ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ankita shreeda vittala

..

kruti by Srida Vittala Dasaru  Karjagi Dasappa


ಇನ್ಯಾತಕನುಮಾನವಯ್ಯಾ ಪ


ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ.


ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು

ವಾಸ ಏಕತ್ರದಲ್ಲಿ

ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ-

ಯಾಸದಿ ಫಲಗಳುಣಿಸಿ

ಲೇಶ ಘನಮಾಡಿ ಸಂತೋಷಪಡುವಾ ನಿನ್ನ

ದ್ವೇಷಿ ನಾನಲ್ಲವಯ್ಯ

ದೇಶಕಾಲಾದಿಗಳಿಗೀಶ ನೀನೆಂದರಿದು

ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ 1


ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ

ಸತ್ಯಸಂಕಲ್ಪ ಹರಿಯೇ

ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ

ಸತ್ತುಪುಟ್ಟುವೆಯಿನ್ನು

ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ

ಚಿತ್ತೈಸೊ ಎನ್ನ ಮಾತಾ

ಅತ್ಯಪರಾಧಿಯಂದತ್ತ ಮೊಗದಿರುಗದಿರು

ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ 2


ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ

ಬÉೂೀಧರ್ತಿರ್ಥಾರ್ಯರಾಪ್ತಾ

ಯಾದವಕುಲೋತ್ತಂಸ ಮಾಧವ ಮಹಿದಾಸ

ಬೋಧಮಯ ಧನ್ವಂತ್ರೀ

ಆದಿನಾರಾಯಣ ವಿನೋದ ವಿಷ್ವಕ್ಸೇನ

ತೋದಕ ಕ್ಷೇಮಧಾಮಾ

ಶ್ರೀದವಿಠಲಾ ನಿನ್ನ ಕ್ರೋಧ ವರರೂಪ-

ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು 3

***