ಜಯ ಜಯ ಸುಗುಣಾಲಯ
ಜಯಜಯ ಹರೇ ಶ್ರೀನರಸಿಂಹ
ಜಯ ಜಯ ಶಶಿಧರಕೋಟಿ ಸದೃಶದೀಪ್ತಿ
ಶರಣ್ಯ ಶ್ರೀನರಸಿಂಹ ಪ
ವಿತತಕೇಸರ ಹತಜಲಮಹೋನ್ನತರೂಪ ಶ್ರೀನರಸಿಂಹ
ಕನಕ ಕಶಿಪು ವಿದಳನಚರಣ ಕಾರುಣ್ಯನಿಧಾನ ಶ್ರೀನರಸಿಂಹ
ಘನಭಕ್ತಿ ನಿಕ್ಷೇ[ಪ ದಯಾಕರ ಜ]ನವಂದ್ಯ ಶ್ರೀನರಸಿಂಹ
ಅಘಮದಜೀಯ ಶಾಲನುತರಾಶ್ರಯನಗಚರಿತ ಶ್ರೀನರಸಿಂಹ
ಅಖಿಲಮೌನಿ ಸುರಸುಖದಾಯಕ ಕರನಖಜಾಲ ಶ್ರೀನರಸಿಂಹ
ಅಸದೃಶಮಹಿಮೆ ವಿಲಸಿತ ವಿಮಲ ಮಾನಸಗಮ್ಯ ಶ್ರೀನರಸಿಂಹ
ಅನವದ್ಯ ತಪೋಧನ ಸನಕಸನಂದನವಂದ್ಯ ಶ್ರೀನರಸಿಂಹ
ದುರಿತತಿಮಿರಭಾಸ್ಕರ ಕೋಸಲಪುರನರನಾಥ ಶ್ರೀನರಸಿಂಹ
***