Showing posts with label ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ kamalanabha vittala. Show all posts
Showing posts with label ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ kamalanabha vittala. Show all posts

Thursday, 5 August 2021

ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ankita kamalanabha vittala

 ..

kruti by Nidaguruki Jeevubai

ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ

ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ


ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ

ಅಸಮಸಾಹಸ ದೈತ್ಯರನು ಗೆಲಿದಿ

ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ

ಹೊಸಪರಿಯ ದೈತ್ಯರನು ಸಂಹರಿಸಿ

ಎಸೆವ ಮಿಥಿಲಾ ಪುರದಿ ಜಾನಕಿ

ಬಿಸಜನೇತ್ರೆಯ ಕೈಪಿಡಿದು ರನ್ನ

ಹೊಸ ಪರಿಯ ರಥದೊಳಗೆ ಪೊರಟು

ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1


ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು

ದಶದಿಕ್ಕಿಗೆ ಪತ್ರವನು ಕಳುಹಿಸಲು

ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು

ಅಸದಳದವರ ಬೇಡಿ ಕಾಡಿಸಲು

ವಸುಧೆಗೀಶನ ವನಕೆ ಕಳುಹಲು

ಕುಶಲವಿಲ್ಲದೆ ಮರುಗೆ ದಶರಥ

ಮಿಸುಣಿಮಣಿ ಸಿಂಹಾಸನ ತ್ಯಜಿ-

ಸುತಲಿ ಪಿತೃ ವಾಕ್ಯವ ನಡೆಸಿದಗೆ 2


ಮಡದಿ ಸೀತಾ ಲಕ್ಷ್ಮಣರ ಕೂಡಿ

ಬಿಡದೆ ದೈತ್ಯರನೆಲ್ಲ ಕಡಿದಾಡಿ

ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು

ಕಡುಜವದಿ ಸಾಗರದಿ ಸೇತುವೆಯ ಮಾಡಿ

ತಡೆಯದಲೆ ರಾವಣನ ಮೂಲವ

ಕಡಿದು ಕಮಲನಾಭ ವಿಠ್ಠಲನು

ಮಡದಿಸಹಿತಾಯೋಧ್ಯೆ ಪುರದಲಿ

ಸಡಗರದಿ ಸಾಮ್ರಾಜ್ಯವಾಳ್ದಗೆ3

***