Showing posts with label ಮಂಗಳಂ ಜಯ ಮಂಗಳಂ ನಿಗಮವ ತಂದ ಮತ್ಸ್ಯಗೆ ನಿತ್ಯ hayavadana MANGALAM JAYA MANGALAM NIGAMAVA TANDA MATSYAGE NITYA. Show all posts
Showing posts with label ಮಂಗಳಂ ಜಯ ಮಂಗಳಂ ನಿಗಮವ ತಂದ ಮತ್ಸ್ಯಗೆ ನಿತ್ಯ hayavadana MANGALAM JAYA MANGALAM NIGAMAVA TANDA MATSYAGE NITYA. Show all posts

Sunday, 7 November 2021

ಮಂಗಳಂ ಜಯ ಮಂಗಳಂ ನಿಗಮವ ತಂದ ಮತ್ಸ್ಯಗೆ ನಿತ್ಯ ankita hayavadana MANGALAM JAYA MANGALAM NIGAMAVA TANDA MATSYAGE NITYA



ಮಂಗಳಂ ಜಯ ಮಂಗಳಂ ಪ.


ನಿಗಮವ ತಂದ ಮತ್ಸ್ಯಗೆ ನಿತ್ಯ ಮಂಗಳ

ನಗಧÀರ ಕೂರ್ಮಗೆ ಅತಿ ಮಂಗಳ

ಜಗವವನುದ್ಧರಿಸಿದ ವರಾಹಗೆ ಮಂಗಳ

ಮಗುವ ಕಾಯ್ದ ನರಸಿಂಹನಿಗೆ 1


ದಾನವ ಬೇಡಿದ ವಾಮನಗೆ ಮಂಗಳ

ಕ್ಷೋಣಿಪರನು ಕೊಂದಗೆ ಮಂಗಳ

ಜÁನಕಿ ರಮಣ ರಾಮಗೆ ಮಂಗಳ

ಜ್ಞಾನಿಗಳ ಕಾಯ್ದ ಗೋಪಾಲಗೆÀ 2


ಬುದ್ಧ ರೂಪದಲಿಹ ದೇವಗೆ ಮಂಗಳ

ಶುದ್ಧ ಅಶ್ವಾರೂಢಗೆÀ ಮಂಗಳ

ಮಧ್ವವಲ್ಲಭ ಹಯವದನಗೆ ಮಂಗಳ

ಉದ್ಧರಿಸುವ ದೇವರ ದೇವಗೆ 3

***

Mangalam jaya mangalam||pa||


Nigamava tanda matsyavatarage

Nagava bennali potta kurmanige

Jagavanuddharisida varahavatarage

Maguvina kayda muddu narasimhage||1||


Bumiya danava bedidage

A maha arasara gelidavage

Raamachandranemba svamige satya-

Bameya arasa gopalakrushnage||2||


Battale nintiha buddhanige

Uttama hayavanerida kalkige

Hattavataradi Baktara salahida

Nitya sri purandaravithalanige||3||

***


ಮಂಗಳಂ ಜಯ ಮಂಗಳಂ||pa||

ನಿಗಮವ ತಂದಾ ಮತ್ಸ್ಯಾವತಾರಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ
ಜಗವನುದ್ಧರಿಸಿದ ವರಾಹಾವತಾರಗೆ
ಮಗುವಿನ ಕಾಯ್ದ ಮುದ್ದು ನರಸಿಂಹಗೆ||1||

ಭೂಮಿಯ ದಾನವ ಬೇಡಿದಗೆ
ಆ ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯ ಅರಸ ಗೋಪಾಲಕೃಷ್ಣಗೆ||2||

ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ನಿತ್ಯ ಶ್ರೀ ಪುರಂದರವಿಠಲನಿಗೆ||3||
***