..
(missing ?)
ಮುದದಿ ನಕ್ರನ ಕೊಂದು ಸಲಹಿದ
ಸದುಭಕುತರ ಬಂಧು
ನಾರಿಯು ತನ್ನ ಕರೆದಾ ಮಾತ್ರದಿ
ಸೀರೆಯ ಮಳೆಗರೆದಾ
ಕ್ರೂರ ಖಳರ ಮುರಿದಾ ಪಾಂಡವ-
ರಾರಣ್ಯದಿ ಪೊರೆದಾ
ನಾರಗೆ ಅಜಮಿಳ ನಾರಾಯಣನೆನೆ
ಪಾರುಗಾಣಿಸಿದಪಾರಗುಣನಿಧಿಯಾ
ಒಂದು ಬಾರಿಗೆ ಶ್ರೀಶನ ನೆನೆದರೆ
ಬಂದ ದುರಿತ ನಾಶಾ
ಬೆಂದದ್ದು ಬಹುಪಾಶಾ ಅವಗಿ-
ನ್ನೆಂದಿಗಿಲ್ಲವೊ ಕ್ಲೇಶಾ
ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ-
ವಿಂದನ ನೆನೆದವರೆಂದಿಗು ಧನ್ಯರು 3
****