Showing posts with label ರಾಮಾ ಮನ್ಮನೋಹಾರಕ ಸೀತಾರಾಮ ರಾಮ raghurama vittala. Show all posts
Showing posts with label ರಾಮಾ ಮನ್ಮನೋಹಾರಕ ಸೀತಾರಾಮ ರಾಮ raghurama vittala. Show all posts

Thursday, 5 August 2021

ರಾಮಾ ಮನ್ಮನೋಹಾರಕ ಸೀತಾರಾಮ ರಾಮ ankita raghurama vittala

  ..

ರಾಮಾ ಮನ್ಮನೋಹಾರಕ ಸೀತಾರಾಮ ರಾಮ

ಮನ್ಮನೋಹಾರಕ ಪ


ರಾಮ ದಶರಥ ರಾಮ ಮಂಗಳನಾಮ ಶ್ರೀ ರಘುರಾಮ

ಗುಣಗಣಧಾಮ ಸಜ್ಜನಪ್ರೇಮ ಹೇ ಜಯ ರಾಮ

ಸೀತಾರಾಮ ರಘುವರ ಅ.ಪ


ಸುರಪತಿ ಮುನಿಸತಿಯ ಅಹಲ್ಯೆಯ ಮರೆಸಿ

ಕೂಡಲು ಕೋಪದಿ

ಗೌತಮಮುನಿ ತರಳೆಯ ಶಪಿಸಿರಲು ಕಲ್ಲಾಗಿ ಬಿದ್ದಿರೆ

ಹಿರಿದುಕಾಲಕೆ ಮುನಿಯೊಡನೆ ರಘುವರ ನೀ

ಪಾದಗಳ ರಜದಿಂ

ತರುಣಿಯಾಗಿಸಿ ಪೊರೆದೆಯೆಂಬೀ ವರ

ಸುವಾರ್ತೆಯ ಕೇಳಿ ಬಂದಿಹೆ 1

ಕಡುವೃದ್ಧೆ ಬೇಡತಿಯು ಅಡವಿಯೊಳಂದು

ಗಿಡ ಮರವಲೆದು

ತಂದು ಫಲಮೂಲಗಳನು ಒಡೆಯ ನೀ ಬರುವೆಯೆಂದು

ಕೇಳುತ ತಾನು | ಬಡವರೊಡೆಯ ನೀನೆಂದರಿತು |

ಕಡುಹಿತದೊಳೆಂಜಲ ಫಲಗಳುಣಿಸಲು|

ಬಿಡದೆ ಶಬರಿಯನು ಕಾಯ್ದೆಯೆಂದೊರೆದ ವಾರ್ತೆಯ

ಕೇಳಿ ಬಂದಿಹೆ 2

ಬಲದಿ ಕೊಬ್ಬಿದ ವಾಲಿಯು ಸುಗ್ರೀವನ

ಛಲದಲೋಡಿಸಿ ರಾಜ್ಯದಿ

ಬಲುಹಿಂದಲವನ ಲಲನೆಯನಪಹರಿಸಿ ಭೋಗಿಸುತಿರಲು

ಇಳೆಯರಸ ನೀನೆಂದು ನಂಬುತ

ಗೆಳೆಯ ಮಾರುತಿಯಿಂದಲರಿತು

ಮಿಳಿತು ವಾಲಿಯ ಕೊಲಿಸಿ ರಾಜ್ಯವ

ಗಳಿಸಿದ್ವಾರ್ತೆಯ ಕೇಳಿ ಬಂದಿಹೆ 3

ಹಿರಿಯಣ್ಣ ದಶಮುಖನು ನಿನ್ನಯ ಸತಿ

ವರಪತಿವ್ರತೆ ಸೀತೆಯ

ಕದ್ದೊಯ್ದಿರೆ ಕಿರಿಯ ವಿಭೀಷಣನು

ಪರಿಪರಿಯಿಂದಲಿರದೆ

ಬೋಧಿಸಿ ಬೇಡಲು ದುರುಳ ರಾವಣನ ಭಂಗಿಸಿ

ಹೊರದೂಡಲವ

ನರಸಿ ನಿನ್ನಯ ಪರಮ ಪಾದಾಶ್ರಯವ ಬೇಡಲು ಪೊರೆದ

ವಾರ್ತೆಯ ಕೇಳಿ ಬಂದಿಹೆ4

ಪರಮಪುರುಷ ನೀನೆಂದು ನಂಬಿದೆ

ಸಿರಿಯರಸ ಪ್ರಭುವು ನೀನೆಂದು

ಹರವಿರಂಚಾದಿಗಳೊಡೆಯ ನೀನೆಂದು

ಚರಾಚರ ಗುರುವು ಪ್ರಭುವು ನೀನೆಂದು

ನಂಬಿದೆನು ಇಂದು ತರಣಿ ಕುಲ ಮಣಿ

ಸಾರ್ವಭೌಮನೆ ಶರಣರಘ

ಕೋಟಿಗಳ ಕಳೆವನೆ ಶರಣ ಬಂದಿಹೆನೆನ್ನ ಪಾಲಿಸದಿರುವರೇ

ರಘುರಾಮ ವಿಠಲ 5

****