..
ಬಾರೆ ಬೇಗನೆ ವಾರಿಜಾಮುಖಿ
ಚಾರುವೇದಕೆ ನೀ ಬಾ ಬೇಗನೆ ಪ
ಕನಕಾಂಬರವನುಟ್ಟು ಘÀನಕಂಚುಕವ ತೊಟ್ಟು
ಹಣೆಗೆ ತಿಲಕವಿಟ್ಟು ವನಜಾಜಿ ಮಲ್ಲಿಗೆಯಾ
ಮುಡಿಯುತ ನೀ ಬೇಗನೆ ಬಾ 1
ಲುಲ್ಲ ಪೈಜಣದಿ ಘಿಲ್ಲು ಘಿಲುರೆನುತಲಿ
ನಿಲ್ಲದೆ ಉಲ್ಲಾಸದೀಗ |
ಬೇಗ ಫುಲ್ಲನಯನೆ ಬಾ 2
ಕಾಮನ ಶಿರೋಮಣಿ ಕಾಮನ ಕರುಣಿ
ಶಾಮಸುಂದರನ ರಾಣಿ ನೀ ಬೇಗೆನ
ಪ್ರೇಮದಿಂದಲಿ ಬಾ 3
***