ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ಕೂಡು | ಸಾಯಾಸಗಳನೇ ಬಿಡು ಪ
ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1
ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2
ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3
ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4
ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
****