Showing posts with label ಬಾರೋ ಬೇಗ ನೀರಜಾಕ್ಷ shree krishna. Show all posts
Showing posts with label ಬಾರೋ ಬೇಗ ನೀರಜಾಕ್ಷ shree krishna. Show all posts

Friday, 20 December 2019

ಬಾರೋ ಬೇಗ ನೀರಜಾಕ್ಷ ankita shree krishna

ರಾಗ : ಫರಜು ತಾಳ : ರೂಪಕ

ಬಾರೋ ಬೇಗ ನೀರಜಾಕ್ಷ
ದೂರು ಇದು ಏತಕೋ     ||ಪ||

ಮೊಸರು ಮಾರುವ ಗೊಲ್ಲತಿಯರ
ಅಸವಳಿಸಿ ನೀ ಕೈಯಪಿಡಿದು
ವಶವಾಗು ಎಂದು ಪೇಳಿ
ನಸುನಗುತಲಿದ್ದೆಯಂತೆ     ||೧||

ಕುಸುಮಶರನ ಪೆತ್ತವನೆ
ಬಸವನಾದೆ ಊರೊಳಗೆ
ಶಶಿಮುಖಿಯರ ದೂರು ಬಹು
ಪಸರಿಸಿತು ನಾ ಪೇಳಲಾರೆ    ||೨||

ಕಂದ ಕೇಳು ಇಂದುಮುಖಿಯರ
ಹೊಂದಿ ನೀನಾಡಲ್ಯಾಕೆ
ಮಂದಿರದೊಳಾಡಿ ಸಲಹೊ
ತಂದೆ ಉಡುಪಿ ಸಿರಿಕೃಷ್ಣ    ||೩||
***

Baro bega nirajaksha
Duru idu etako ||pa||

Mosaru maruva gollatiyara
Asavalisi ni kaiyapididu
Vasavagu endu peli
Nasunagutaliddeyante ||1||

Kusumasarana pettavane
Basavanade urolage
Sasimukiyara duru bahu
Pasarisitu na pelalare ||2||


Kanda kelu indumukiyara
Hondi ninadalyake
Mandiradoladi salaho
Tande udupi sirikrushna ||3||
***