ಆನಂದ ಆನಂದ ಮತ್ತೆ ಪರಮಾನಂದ
ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ||
ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧||
ಜಲ ಕಾಷ್ಟ ಶೈಲ ಗಗನ ನೆಲ ಪಾವಕ
ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨||
ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು
ರೂಪ ಲಾವಣ್ಯವು ಹರಿಯ ವ್ಯಾಪಾರವೆಂದರಿತವರಿಗೆ ||೩||
ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣ ದರುಶನ
ಶುದ್ಧ ವಿಜಯವಿಠಲನ ಪೊಂದಿ ಕೊಂಡಾಡುವವರಿಗೆ ||೪||
***
ರಾಗ : ಶಂಕರಾಭರಣ ತಾಳ : ಆದಿ (raga tala may differ in audio)
Ananda Ananda matte paramananda ||pa||
A nandana nandanoliye Enandadde vedavrunda ||a.pa||
A modalu ksha karanta I maha varnagalella
Svamiyada vishnuvina namavendu tilidavarige ||1||
Popudu barutippudu kopa matte santhi maduvudu
Rupa lavanyavu harivyaparavendaritavarige ||2||
Jala kashtha Saila gagana nela pavaka vayu taru
Pala pushpa ballili hari olage vyaptanendavage ||3||
Taro baro biro saro maro toro haro horo
Sero torembudisaprerane endavarige ||4||
Madhvasastra pravacana muddukrushnana darusana
Siddha vijayavithalanna pondi kondaduvavarige ||5||
***
pallavi
AnandA AnandA matte paramAnadA Ananda nandanoliye Enandadde vEdavrandA
caraNam 1
?a? modalu ?kSa? kArAnta I mahA varNagaLella svAmiyAda viSNuvina nAmavendu tiLidavarige
caraNam 2
pOpadu barutippudu kOpa shAnti mADuvudu rUpa lAvanyavu hari vyAparavendavarige
caraNam 3
jalakASTa shaila gagana nela pAvaka vAyu taru phala puSpa baLLili hari oLage vyAptanendavage
caraNam 4
tArO bArO bIrO sArO mArO tOrO hArO hOrO sErO kOrOdemba dishA prEraNe endavarige
caraNam 5
madhva shAstra pravacana muddu krSNana darushana siddha vijayaviThalanna pondi koNDADuvarige
***
ಆನಂದ ಆನಂದ ಮತ್ತೆ ಪರಮಾನಂದ ।।ಪ।।
ಆ ನಂದನ ನಂದನೊಲಿಯೆ ಏನಂದದ್ದೆ ವೇದವೃಂದಾ ।।ಅ.ಪ।।
ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ।।೧।।
ಪೋಪುದು ಬರುತಿಪ್ಪುದು ಕೋಪ ಮತ್ತೆ ಶಾಂತಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದರಿತವರಿಗೆ ।।೨।।
ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು
ಫಲ ಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ।।೩।।
ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊ
ಸೇರೋ ತೋರೆಂಬುದೀಶಪ್ರೇರಣೆ ಎಂದವರಿಗೆ ।।೪।।
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವರಿಗೆ ।।೫।।
***