ಶ್ರೀನಿವಾಸನು ಒಲಿಯನು ಕೇಳೋ
ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ||
ಏನೇನೋ ಸತ್ಕರ್ಮವ ಮಾಡಲು
ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ||
ಸ್ನಾನವು ಸಂಧ್ಯಾವಂದನ ಜಪತಪ
ಜ್ಞಾನ ಸಾಧನವಿದೆನ್ನದಲೆ
ಧಾನಧರ್ಮಗಳು ಈಶನ ಅನು
ಸಂಧಾನವಮಾಡಿ ಮಾಡದಲೆ ||1 ||
ಕಾಮ ಕ್ರೋಧ ಲೋಭ ದುರಾತ್ಮಕ
ಆ ಮಹಾ ರಿಪುಗಳ ಜಯಿಸದಲೆ
ಪ್ರೇಮಾದಿ ಶ್ರೀಹರಿ ಭಕುತರ ಚರಣದಿ
ನೇಮದಿ ನಿತ್ಯ ನಮಿಸದಲೆ || 2||
ಬಾಲಕ ಸತಿ ಮೊದಲಾದ ಜನರು ಶ್ರೀ
ಲೋಲನ ಸೇವಕರೆನ್ನದಲೆ
ಕಾಲ ದೇಶ ಅಸು ಮೊದಲಾದುವು
ಗೋಪಾಲಗೆ ಆಧೀನವೆನ್ನದಲೆ ||3||
ಸಾಧು ಸಂಗದಲಿ ತೀರ್ಥಯಾತ್ರೆಗಳ
ಪಾದದಿ ನಡೆದು ನೀ ಮಾಡದಲೆ
ಬೇಡಪಂಚಕವು ಜಗದಿ ಅಭೇದವ
ಮಾಧವನಲಿ ನೀ ತಿಳಿಯದಲೆ ||4||
ಒಂದು ಕ್ಷಣವು ಬಿಡದಿಂದಿರೇಶ
ಗೋವಿಂದನಂಘ್ರಿಯ ನೆನೆಯದಲೆ
ವಂದ್ಯನು ಶ್ರೀ ಪುರಂದರ ವಿಟ್ಠಲ
ಬಂಧವಿಮೋಚಕನೆನ್ನದಲೆ || 5 ||
********
ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ||
ಏನೇನೋ ಸತ್ಕರ್ಮವ ಮಾಡಲು
ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ||
ಸ್ನಾನವು ಸಂಧ್ಯಾವಂದನ ಜಪತಪ
ಜ್ಞಾನ ಸಾಧನವಿದೆನ್ನದಲೆ
ಧಾನಧರ್ಮಗಳು ಈಶನ ಅನು
ಸಂಧಾನವಮಾಡಿ ಮಾಡದಲೆ ||1 ||
ಕಾಮ ಕ್ರೋಧ ಲೋಭ ದುರಾತ್ಮಕ
ಆ ಮಹಾ ರಿಪುಗಳ ಜಯಿಸದಲೆ
ಪ್ರೇಮಾದಿ ಶ್ರೀಹರಿ ಭಕುತರ ಚರಣದಿ
ನೇಮದಿ ನಿತ್ಯ ನಮಿಸದಲೆ || 2||
ಬಾಲಕ ಸತಿ ಮೊದಲಾದ ಜನರು ಶ್ರೀ
ಲೋಲನ ಸೇವಕರೆನ್ನದಲೆ
ಕಾಲ ದೇಶ ಅಸು ಮೊದಲಾದುವು
ಗೋಪಾಲಗೆ ಆಧೀನವೆನ್ನದಲೆ ||3||
ಸಾಧು ಸಂಗದಲಿ ತೀರ್ಥಯಾತ್ರೆಗಳ
ಪಾದದಿ ನಡೆದು ನೀ ಮಾಡದಲೆ
ಬೇಡಪಂಚಕವು ಜಗದಿ ಅಭೇದವ
ಮಾಧವನಲಿ ನೀ ತಿಳಿಯದಲೆ ||4||
ಒಂದು ಕ್ಷಣವು ಬಿಡದಿಂದಿರೇಶ
ಗೋವಿಂದನಂಘ್ರಿಯ ನೆನೆಯದಲೆ
ವಂದ್ಯನು ಶ್ರೀ ಪುರಂದರ ವಿಟ್ಠಲ
ಬಂಧವಿಮೋಚಕನೆನ್ನದಲೆ || 5 ||
********