..
kruti by Nidaguruki Jeevubai
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ
ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ
ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ
ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ
ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ
ಇನ್ನು ಪಾಲಿಸು ದೇವನೆ
ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ
ಇನ್ನು ಕರುಣಿಸೊ ಕೇಶವಾ
ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ
ನಿನ್ನ ಮೊರೆಯಿಡುವೆ ಹರಿಯೇ
ಚನ್ನ ಶ್ರೀಗೋಪಾಲ ಗೋವಿಂದ ಕೇಶವ
ನಿನ್ನ ನಾಮನಿರಂತರವು ಪಾ-
ವನ್ನ ಮಾಡಲಿ ಎನ್ನ ಜಿಹ್ವೆಯಾ 1
ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ
ಭೇದವಿಲ್ಲದೆ ಕರುಣಿಸೊ
ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ-
ಮಾದರವ ನಿತ್ತು ಸಲಹೊ
ಸಾಧು ಜನರೊಡಗೂಡಿ ಮೋದ ಪಡುವ ಭಾಗ್ಯ
ಮಾಧವನೆ ದಯಪಾಲಿಸೋ
ಶ್ರೀದ ಶ್ರೀಭೂರಮಣ ಮಾಧವ ಜನಾರ್ದನ
ಕ್ರೋಧಿ ಸಂವತ್ಸರವು ಭಕುತರ
ಕ್ರೋಧಗಳ ಕಳೆಯುತ್ತ ಸಲಹಲಿ2
ಶರಣೆಂದು ಬೇಡುವೆ ಪರಿಪರಿ ಅಘಗಳ
ಪರಿಹರಿಸೆಂದು ನಾ ಸ್ಮರಿಸಿಬೇಡುವೆನು
ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ
ಹರುಷದಿ ನೆಲಸೆನ್ನ ಹೃದಯದಲಿ ದೇವ
ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ
ಕಡುಭಾಗವತರ ಸಂಗವನೆ ನೀಡೈ
ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ
ತಡೆಯದಲೆ ಪಾಲಿಸುತ ಪೊರೆ ಶ್ರೀ
ಕಮಲನಾಭ ವಿಠ್ಠಲನೆ ದಯದಲಿ 3
***