ರಾಜ ಮನೆಗೆ ಬಂದ ಶ್ರೀಗುರು || ಪ ||
ಚಂದನ ಲೇಪಿತ ಚಂದಿರ ನಯನ ರಾಘವೇಂದ್ರ ಜೀಯಾ || ಅಪ ||
ಶೋಭಿಸುತಿರೆ ಕೊರಳೊಳು ತುಳಸೀಮಾಲೆ ತ್ರಿಲೋಕ
ಮಹಿಮನ ಕರದಲಿ ಜಪಮಾಲೆ ವೃಂದಾವನದಿಂದ || ೧ ||
ಮಸ್ತಕದಲಿ ಹರಿ ಶ್ರೀಮುದ್ರೆ ಹೃದಯಮೂಲೆಲಿ
ಶ್ರೀರಾಮಭದ್ರೆಗೆ ದಿವ್ಯಾಂಬರದಿಂದ || ೨ ||
ಮಧ್ವಮತಾಂಬುಧಿ ಸುರವರ ಚಂದಿರ ಘನ ಕರುಣಾಂಬುಧಿ
ತ್ರಿಲೋಕ ಸುಂದರ ಮೋಹನ ವಿಠಲ ಪ್ರಿಯ || ೩ ||
***