Showing posts with label ರಾಜರೆಂದರೆ ಶ್ರೀಪಾದರಾಜರಯ್ಯ shyamasundara sripadaraya stutih. Show all posts
Showing posts with label ರಾಜರೆಂದರೆ ಶ್ರೀಪಾದರಾಜರಯ್ಯ shyamasundara sripadaraya stutih. Show all posts

Thursday, 26 December 2019

ರಾಜರೆಂದರೆ ಶ್ರೀಪಾದರಾಜರಯ್ಯ ankita shyamasundara sripadaraya stutih

ರಾಜರೆಂದರೆ ಶ್ರೀಪಾದರಾಜರಯ್ಯ |
ರಾಜೀವ ಲೋಚನ ರಂಗವಿಠ್ಠಲ ಭಜಕ || ಪ ||

ಸ್ಮರಣೆ ಮಾತ್ರದಿ ಅನ್ನ ವಸನಗಳನೀಯುತಲಿ |
ಹರಿಭಕ್ತಿ ಹರಿಜ್ಞಾನ ಭಕ್ತಿಯನು ಕರುಣಿಸುವರು |
ಭರದಿ ದಾರಿದ್ರ್ಯವನು ಪರಿಹಾರ ಮಾಡುತಲಿ |
ನಿರುತ ಧರ್ಮದಿ ನಡೆವ ಮನವಿತ್ತು ಸಲಹುವ || ೧ ||

ವರ ವಾದಿರಾಜ ವ್ಯಾಸ ವಿಜಯೀಂದ್ರರಿಗೆ |
ಪರವಿದ್ಯೆ ವೈರಾಗ್ಯ ಭೋಧಿಸುತಲಿ ||
ಧರಣಿಯೊಳು ಹರಿದಾಸ ಮಾರ್ಗದಲಿ ನಡೆಸಿದ |
ಪರಮ ಕಾರುಣ್ಯ ಗುರು ನರಹರಿ ಪ್ರೀಯರು || ೨ ||

ಚತುಃಷಷ್ಠಿ ಶಾಖಗಳನ್ನು ನಿಷ್ಠೆಯಿಂದಲಿ ತಾವೇ |
ಪರಮೇಷ್ಠಿ ಪಿತನಿಗೆ ಅರ್ಪಿಸುತಲಿ |
ಕಷ್ಟಕಾರ್ಪಣ್ಯಗಳ ಏನೊಂದು ಭರಿಸದಲೆ |
ಸೃಷ್ಠೀಶನಂಘ್ರಿಯನು ನಿತ್ಯ ಭಜಿಸುತ ಮೆರೆವ || ೩ ||

ಇವರ ಮಹಿಮೆಗಳನ್ನು ಪೊಗಳಲೆನ್ನಳವಲ್ಲ |
ಕವಿತೆ ಸಾಹಿತ್ಯದಲಿ ಕುಲಗುರುಗಳು |
ಧ್ರುವನ ಅವತಾರಿಗಳು ಸಂದೇಹ ಇನಿತಿಲ್ಲ |
ಪವಮಾನ ಜನಕ ಗುರು ಶ್ಯಾಮಸುಂದರಪ್ರೀಯರು || ೪ ||
********