Showing posts with label ತಂದು ತೋರೆ ತಡಿಯೆನೆ ತಾಳಲಾರೆನೆ prasannavenkata. Show all posts
Showing posts with label ತಂದು ತೋರೆ ತಡಿಯೆನೆ ತಾಳಲಾರೆನೆ prasannavenkata. Show all posts

Monday, 11 November 2019

ತಂದು ತೋರೆ ತಡಿಯೆನೆ ತಾಳಲಾರೆನೆ ankita prasannavenkata

by ಪ್ರಸನ್ನವೆಂಕಟದಾಸರು
ತಂದು ತೋರೆ ತಡಿಯೆನೆ ತಾಳಲಾರೆನೆ ತಂಗಿಹೆಂದಳ ವೇಲಾಪುರದ ಚೆನ್ನಿಗನಭಾವಕಿಪ.

ಮಂಗಳ ನೋಟಕೆ ಮೆಚ್ಚಿ ಮರುಳಾದೆನೆಲೆ ತಂಗಿಅಂಗವೆಲ್ಲ ಕಮಠಾದವನಪ್ಪಿಸಮ್ಮಭಾವಕಿ1

ಕೊನೆವಲ್ಲಿಗೆಧರೆಸೋಂಕಲು ವಶ್ಯವಾದೆನೆಲೆ ತಂಗಿಘನಕೋಪವ್ಯಕ್ತನ ಕೂಡಿಸಮ್ಮಭಾವಕಿ2

ಮಾನದಂತಿದ್ದ ಬಲಿಯ ಮೆಚ್ಚಿ ನುಂಗುವರೆ ತಂಗಿಕ್ಷಣಯುಗವಾಗಿದೆ ಸದ್ವೀಕ್ಷಣ ಕಾಣದೆಭಾವಕಿ3

ಹೆಂಗಳ ಬಿಟ್ಟೊಬ್ಬನೆ ತಾ ಹ್ಯಾಗೆ ಹೋದ ಹೇಳೆ ತಂಗಿಪೊಂಗೊಳಲೂದುತಲೆನ್ನ ಪಾಲಿಸೆನ್ನೆಭಾವಕಿ4

ಮೋಹನ ಬಾರದೀ ಗಂಧಮಲ್ಲಿಗ್ಹಾರ್ಯಾಕೆ ತಂಗಿ ಬರಹೇಳೆ ಪ್ರಸನ್ನವೆಂಕಟನ ವಾಜಿಯಿಂದಭಾವಕಿ5
********