Showing posts with label ನೀನೇ ಗತಿ ಮಾಧವಾ ದೇವರದೇವನೀನೇ govinda. Show all posts
Showing posts with label ನೀನೇ ಗತಿ ಮಾಧವಾ ದೇವರದೇವನೀನೇ govinda. Show all posts

Wednesday, 13 November 2019

ನೀನೇ ಗತಿ ಮಾಧವಾ ದೇವರದೇವನೀನೇ ankita govinda

by ಗೋವಿಂದದಾಸ
ನೀನೇಗತಿಮಾಧವಾ ದೇವರದೇವನೀನೇ ಗತಿಯು ನಮ್ಮ ಮಾನಾಭಿಮಾನವಹಾನಿಗೊಳಿಸದನುಮಾನವಿಲ್ಲದೆ ಕಾಯೋ ಪ

ಸಾಕಾರ ಸೌಭಾಗ್ಯವೂ ಸರ್ವವೂ ಸರ್ವಶೋಕಕ್ಕೆ ಕಾರಣವೂಬೇಕಾದ ಕಡುರಸ ಶಾಕಪಾಕದ ರೂಪಿಶ್ರೀಕೃಷ್ಣ ನಿನ್ನಯ ನಾಮದಿಂದಧಿಕನೆ 1

ಸಕಲ ಸಂಭ್ರಮವು ನೀನೇ ನಿನ್ನನು ಎನ್ನಸಖನೆಂದು ನಂಬಿದೆನುಸಕಲ ಚರಾಚರ ಪ್ರಾಣಿಗಳಿಗೆ ಸರ್ವಸುಖದುಃಖವುಣಿಸುವ ಸಕಲ ತಂತ್ರನೇ 2

ಆದಿಮೂರುತಿಯು ನೀನೇ ಧರ್ಮಾಧರ್ಮಶೋಧಿಸುವವನು ನೀನೇವೇದಗಮ್ಯನೆ ಯೆನ್ನ ಖೇದಮೋದವ ನಿನ್ನಲ್ಲಿಪಾದಕರ್ಪಿಸಿದೆ ಗೋವಿಂದದಾಸನೆ ಕಾಯೊ 3
*******