ಇಂದು ಭಕ್ತರು ಬಂದರೆಂದು ಗೋವಿಂದ ತಾ ನಲೆದಾಡಿದ ಗೋಪಾಲ ತಾ ನಲೆದಾಡಿದ ಪ.
ಹರಿಯು ಆಡಿದ ಮಾತು ದೊರೆ ಧರ್ಮನು ಕೇಳಿಕರುಣಾಳು ನಿಮ್ಮ ಕೃಪೆಯಿಂದ ಕರುಣಾಳು ನಿಮ್ಮ ಕೃಪೆಯಿಂದಪರಮ ಆಶೀರ್ವಾದ ಇರಲುಂಟು1
ಮುತ್ತಿನ ಮಂಚದ ಹತ್ತಿಲೆ ಸಾಲಾಗಿಮತ್ತ ಪಾಂಡವರು ಕುಳಿತರುಮತ್ತ ಪಾಂಡವರು ಕುಳಿತರು ಹರುಷದಿಭಕ್ತವತ್ಸಲನ ಮುಖನೋಡಿ 2
ಹಸಿರು ಪಚ್ಚವ ಬಿಗಿದ ಕುಸುರು ಸಿಂಹಾಸನದೇಶಕೆಲ್ಲ ಬೆಳಕು ಎಸೆಯುತದೇಶಕೆಲ್ಲ ಬೆಳಕು ಎಸೆವೊ ಸಿಂಹಾಸನದಿವಸುಧಿಪಾಲಕರು ಕುಳಿತರು 3
ಇಂದ್ರಾದಿಗಳು ಮುನಿವೃಂದ ಸಹಿತಾಗಿ ಬಂದು ಒಂದೆ ಮನದಲೆ ಕುಳಿತರು ಒಂದೆ ಮನದಲೆ ಕುಳಿತರು ದೇವಕಿನಂದನ ನೋಡಿ ಹರುಷಾಗಿ 4
ರನ್ನ ಮಾಣಿಕ ಬಿಗಿದ ಹೊನ್ನಮಂಚಕೆಹೊಂದಿ ಕನಿ ಸುಭದ್ರೆ ದ್ರೌಪದಿಕನಿ ಸುಭದ್ರೆ ದ್ರೌಪದಿ ಕುಳಿತರುಚನ್ನ ಕೃಷ್ಣಯ್ಯನ ಮುಖನೋಡಿ5
ಚಿತ್ರ ವಿಚಿತ್ರದ ರತ್ನಗಂಬಳಿ ಮ್ಯಾಲೆಪುತ್ರರ ಸಹಿತ ಹರುಷದಿಪುತ್ರರ ಸಹಿತ ಹರುಷದಿ ಕುಳಿತರು ಭಕ್ತವತ್ಸಲನ ಮುಖ ನೋಡಿ 6
ಸಾಲು ದೀವಿಗೆಯಂತೆ ಬಾಲೆಯರುಕುಳಿತಾರೆ ಬಾಲರ ಸಹಿತ ಹರುಷದಿಬಾಲರ ಸಹಿತ ಹರುಷದಿ ರುಕ್ಮಿಣಿ ನಿಂತಿಹಳು ಲೋಲ ರಾಮೇಶನ ಮುಖನೋಡಿ7
****