Showing posts with label ಪರಮ ದಯಾಕರನೇ ಗೌರೀಸುತನೇ hanumesha vittala. Show all posts
Showing posts with label ಪರಮ ದಯಾಕರನೇ ಗೌರೀಸುತನೇ hanumesha vittala. Show all posts

Tuesday, 1 June 2021

ಪರಮ ದಯಾಕರನೇ ಗೌರೀಸುತನೇ ankita hanumesha vittala

ಪರಮ ದಯಾಕರನೇ ಗೌರೀಸುತನೇ

ಪರಿಪರಿಯಿಂದಲಿ ಪಾಲಿಸು ಯೆನ್ನನು ಪ

ಸಿದ್ಧಿವಿನಾಯಕ ವಿದ್ಯಾಪ್ರದಾಯಕ

ಸದ್ಬುದ್ಧಿಯ ಕೊಡು ಮೋದಕಪ್ರಿಯನೆ1

ಮೂಷಕವಾಹನ ದೋಷರಹಿತನೇ

ಅಸುರನಾಶ ಸರ್ಪಾಕಟಿಸೂತ್ರನೇ 2

ಜಾನಕೀರಮಣ ಶ್ರೀ ಹನುಮೇಶವಿಠಲನ

ಧ್ಯಾನವ ಕೊಟ್ಟು ರಕ್ಷಿಸೋ ಅನುದಿನ 3

****