Showing posts with label ಬಂದ ಶ್ರೀ ಹರಿ ಬಂದ krishnavittala. Show all posts
Showing posts with label ಬಂದ ಶ್ರೀ ಹರಿ ಬಂದ krishnavittala. Show all posts

Monday 2 August 2021

ಬಂದ ಶ್ರೀ ಹರಿ ಬಂದ ankita krishnavittala

ಬಂದ ಶ್ರೀ ಹರಿ ಬಂದ ಪ

ಬಂದ ಬಂದ ಮುಚುಕುಂದ ಪರದ ಅರ-

ವಿಂದನಯನ ಗೋವಿಂದ ಪರಾತ್ವರ

ಕಂದನೆನ್ನ ಮನ ಮಂದಿರಕೀಗಲೆ

ನಂದವ ನೀಡುತ ಇಂದಿರೆಸಹಿತದಿ ಅ.ಪ.


ನೀರೊಳಗಾಡುವ ವೀರನು ಬಂದ ಭಾರಿಗಿರಿಯನು

ಪೊತ್ತವ ಬಂದ

ನಾರಿಯವೇಷದಮೋಹಕ ಬಂದ ವಾರಿಜೆಸಿರಿವರ

ಅಜಿತನುಬಂದ

ಚಾರುವರಾಹನು ಭೂಸಹಬಂದ ಪೋರನ ಸಲಹಿದ

ಘೋರನು ಬಂದ

ಮೂರಡಿ ಯಾಚಕ ವಾಮನ ಬಂದ ಹಾರಿಸಿ ಕ್ಷಿತಿಪರ

ಭಾರ್ಗವ ಬಂದ

ತಾರಕನಾಮದ ರಾಮನುಬಂದ

ಕೌರವವಂಶಕುಠಾರನು ಬಂದ

ಚಾರುದಿಗಂಬರ ಬುದ್ಧನುಬಂದ ಏರುತ ಕುದುರೆಯ

ಕಲ್ಕಿಯು ಬಂದ 1

ಬಾದರಾಯಣ ಮಹಿದಾಸನುಬಂದ ವೇದಗಳ

ಉಸುರಲು ಹಯಮುಖಬಂದ

ಬೋಧಿಸಿ ಸಾಂಖ್ಯವ ಕಪಿಲನು ಬಂದ ಸಿದ್ಧಿಗಳೀಯಲು

ದತ್ತನುಬಂದ

ಸಾಧುತಪೋನಿಧಿ ಋಷಭನು ಬಂದ ಮೋದವ

ನೀಡಲು ಯಜ್ಞನುಬಂದ

ವೇಧನ ಗುರುತಾಹಂಸನು ಬಂದ

ಸಾಧುಹರಿನಾರಾಯಣ ಬಂದ

ಛೇದಿಸಲಘ ಬಡಬಾನಳ ಬಂದ ಮೋದಮಯ

ಶಿಂಶುಮಾರನು ಬಂದ

ಗೋzsರ ಕೃಷ್ಣನು ತಾಪಸಬಂದ ಶೋಷಿಸಿಭವ

ಧನ್ವಂತ್ರಿಯು ಬಂದ 2

ವಾಸುದೇವ ಜಗಜೀವವಿಲಕ್ಷಣ ನಾಶರಹಿತ

ಶ್ರೀ ವಿಷ್ಣುವು ಬಂದ

ದೋಷದೂರ ಪರಿಪೂರ್ಣ ಗುಣಾರ್ಣವ ಕ್ಲೇಶಕಳೆದು

ಉಲ್ಲಾಸದಿ ಬಂದ

ಶೇಷಶಯನ ಭವಭಂದವಿಮೋಚಕ ದಾಸಜನರ

ಸಂತೋಷನು ಬಂದ

ವಿಶ್ವ ತೈಜಸ ಪ್ರಾಜ್ಞತುರ್ಯನು ಭಾಸವ ಬೀರುತ

ಕರುಣದಿ ಬಂದ

ಶ್ವಾಸವಿನುತ ಪರಮೇಶ ಸನಾತನ ಶಾಶ್ವತಸುಖಿ

ಮುಕ್ತೇಶನು ಬಂದ

ಕೇಶವಾದಿ ಚತುರ್ವಿಂಶತಿ ರೂಪ ವಿಲಾಸದಿ

ಪರಾದ್ಯನಂತನು ಬಂದ 3

ಏಕಾನೇಕಸುರೂಪ ವಿನಾಯಕ ಮಾಕಳತ್ರ

ಜಗನೂಕೂವ ಬಂದ

ನಾಕಪತಿ ಪುರುಹೂತ ವಿನುತ ಸುರನೀಕಪೋಷ

ಸಕಲಾರ್ತಿಹರ ತಾ ಬಂದ

ಶೋಕ ದೂರ ನಿಸ್ಸೀಮನು ಬಂದ ನೋಕನೀಯ

ವೈರಾಜ್ಯನು ಬಂದ ಶೃತಿ-

ನೀಕ ಸುವಂದಿತನಿರುಪಮ ಬಂದ ವಾಕುಮನಕೆ

ಸಾಕಲ್ಯಸಿಗದ ಪುಣ್ಯ-

ಶ್ಲೋಕ ಪರಾವರಸ್ಥಾನನು ಬಂದ ನಾಲ್ಕುನಾಶ

ವಿವರ್ಜಿತ ಭಗಲೋಕೈಕ ವಂದ್ಯ

ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4

ಸರ್ವನಿಯಾಮಕ ಸರ್ವಸುನಾಮಕ

ಸರ್ವಸಾಕ್ಷಿಗಭೀರ ಪರಾಕು

ಸರ್ವಸುವ್ಯಾಪ್ತನೆ ಸರ್ವಸುಭೋಕ್ತನೆ ಸರ್ವತಂತ್ರ

ಸ್ವತಂತ್ರನೆ ಪರಾಕು

ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು

ಸರ್ವರಿಗುತ್ತಮ ಸರ್ವರಸರ್ವನೆ ಸರ್ವಶಬ್ದ

ಪ್ರತಿಪಾದ್ಯಪರಾರು

ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು

ಸಮನೆ ಪರಾಕು

ಶರ್ವವಂದ್ಯ ಜಗದೇಕನಾಥ ನಿಜ ಸಾರ್ವಭೌಮ

ಸಚ್ಚಿದಾನಂದ ಪರಾಕು 5

ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು

ನಿತ್ಯಾಹೇಯ ಪರತಃಪರಾತರ ಸತ್ತಾದಿ

ನಿಖಿಳಪ್ರದಾಯಕ ಪರಾಕು

ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು

ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು

ನೀತ e್ಞÁನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು

ಮಾತರಿಶ್ವ ಸರ್ವಾಂತರ್ಯಾಮಿ ನಿರ್ಲಿಪ್ತ ಸರ್ವಸುಸಾರ

ಭೋಕ್ತ ಪರಾಕು 6

ಜಯಜಯದೇವವರೇಣ್ಯ ಪರಾಕು ಜಯಜಯ ಪಂಚ

ರೂಪಾತ್ಮ ಪರಾಕು

ಜಯಜಯವ್ಯಾಹೃತಿ ತತಿ ನುತವಂದ್ಯ ಜಯಜಯ

ಪುರುಷ ಸೂಕ್ತ ಸುಗೇಯ

ಜಯಜಯ ಮುನಿಗಣ ಧ್ಯಾತಪರಾಕು ಜಯಜಯ

ಪ್ರಖ್ಯಾತ ಮಹಾಮಹಿಮ ಪರಾಕು

ಜಯಜಯ ಆತ್ಮಾರಾಮಪರಾಕು ಜಯಜಯ ಸಾಸಿರ

ನಾಮಕ ಪರಾಕು

ಜಯಜಯ ಅಚ್ಯುತಾನಂತ ಸುನಾಮ ಜಯಜಯ

ಓಂಕಾರಾಧಿಪ ಪರಾಕು

ಜಯಜಯ ಅನಾದಿಸರ್ವಜ್ಞ ವಿಭೂತಿ ಜಯಜಯ

ಇಂದಿರಾರಾದ್ಯ ಮಹೇಶ ಪರಾಕು 7

ವೈಕುಂಠಾದಿ ತ್ರಯಧಾಮ ನಿಷ್ಕುಟಿಲ ಭಕ್ತರಲಿ

ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ

ದಕ್ಕನು ನಿಜ ಖಳರಿಗೆ ಭೀಮ ತಕ್ಕಾಫಲಂಗಳ ನೀಡುವ

ಕರುಣಾಮಣಿ ಶ್ರೀಕಾಮ

ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ

ಉಕ್ಕದ ತಗ್ಗದ ವಿಭು ನಿಷ್ಕಾಮ ಮುಕ್ತಾಮುಕ್ತ

ವಿನುತ ಗುಣಲಲಾಮ

ಮುಕ್ತಿದ ಶ್ರೀಮದನಂತ ಸುನಾಮ ಭಕ್ತರ ಭಿಡೆಸಲಿಸುವ

ಮೇಘಶ್ಯಾಮ 8

ನಂದತೀರ್ಥ ಮುನಿಮಾನಸ ಚಂದಿರ ಇಂದೀವರನಿಭ

ಸುಂದರ ಬಂದ

ಹಿಂದೆ ಮುಂದೆ ಎಂದೆಂದಿಗು ನಿಜಸುಖದಿಂದಲೆ

ಸೃಷ್ಠಿಸ್ಥಿತಿಲಯಗೈವ ಮು-

ಕುಂದ ಶೃತಿ ಪರಾಕಾಷ್ಠಾನುಬಂದ | ವಂದಿಪ ಜನರಘ

ವೃಂದಕಳೆದು ನಿಜ-

ನಂದವ ನೀಡುವ ಭೂತಿದ ವಿಭುವರ ಪರಮಾನಂದ

ಸುಧಾರ್ಣವ ಬೃಹತೀನಾಮಗ

ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ

ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು

ಮಂದಜ ಭವ ಪರಿವಾರದ ಕೂಡಿಯೆ ಬಂದಾ 9

****