..
ಸದರವಲ್ಲವೊ ನಿಜಯೋಗ - ಸಚ್ಚಿದಾನಂದಸದಮಲ ಗುರುದಿಗಂಬರನ ಸಂಯೋಗ ಪ
ಅಡಿಯನಂಬರ ಮಾಡದನಕ - ಅಗ್ನಿಕಿಡಿಯೆದ್ದು ಮೇಲಣ ಕೊಡನುಕ್ಕದನಕಒಡಲೆರಡೊಂದಾಗದನಕ _ ಅಲ್ಲಿಒಡಗೂಡಿ ಅಂಗನೆ ನುಡಿಗೇಳದನಕ 1
ನಾಡಿ ಹಲವು ಕಟ್ಟದನಕ - ಬ್ರಹ್ಮನಾಡಿಯೊಳು ಪೊಕ್ಕು ಮುಳುಗಾಡದನಕಕಾಡುವ ಕಪಿ ಸಾಯದನಕ - ಸತ್ತಓಡಿನೊಳಗೆ ರಸ ತೊಟ್ಟಿಕ್ಕದನಕ 2
ಆದಿಕುಂಭ ಕಾಣದನಕ - ಅಲ್ಲಿಸಾಧಿಸಿ ಭೇದಿಸಿ ಸವಿಯುಣ್ಣದನಕಭೇದವು ಲಯವಾಗದನಕ - ಬಡದಾದಿಕೇಶವ ನಿಮ್ಮ ನೆಲೆಗಾಣದನಕ3
***