..
kruti by shantibai dasaru ಶಾಂತಿಬಾಯಿ ದಾಸರು
ನಾರಾಯಣಾ ಕರುಣಾ ಘನಚರಣಕ್ಕೆರಗುವೇ
ಸ್ಮರಣೆಯೊಳಗೆ ಮನ ಒಲಿಯಿಸಿ ಪ್ರೇರಣೆ ಮಾಡುವಾ ಪ
ನನ್ನ ನಿಜವನರಿಯದೆ ನಾ
ಅನ್ಯ ಯೋನಿಯೊಳಗೆ ತಿರುಗಿ
ಬನ್ನ ಬಡುವುದನ್ನು ತಿಳಿದು
ನಿನ್ನ ಬಿಡೆನೆನ್ನೆ 1
ಭಾವಭಕ್ತಿಯಿಂದ ಪಿಡಿದು
ನೋಯದಂತರದೊಳಗಿಳಿದು
ಸಾವಧಾನದಿ ಸೇವೆಮಾಳ್ಪೆ
ಭಾವ ಬಲಿದು ನಾ 2
ಎಲ್ಲಿಯೂ ಪರಿಪೂರ್ಣ ನೀನೆ
ಸೊಲ್ಪಗೊಡಲಶಕ್ಯ ನಾನೈ
ಬಲ್ಲಿದವರಿಂದೆಲ್ಲಾ ಅರಿಶ
ಘುಲ್ಲನಾಭನೇ 3
ನಾದದ ಮೊದಲಿನ ಮೂಲದಿ
ಭೇದಭಾವವೆಲ್ಲ ಅಳಿದು
ಆದಿಶಾಂತಿ ಸುಖವನೀವ
ನಾದಿ ಶ್ರೀಗುರು 4
***